ADVERTISEMENT

ಮಹಿಳೆಯರ ವಿಡಿಯೊ ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದವ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 18:22 IST
Last Updated 10 ಜುಲೈ 2025, 18:22 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಡೆದಾಡುವ ಮಹಿಳೆಯರ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಕೆ.ಆರ್.ಪುರದಲ್ಲಿ ನೆಲಸಿದ್ದ ಪಂಜಾಬ್‌ನ ಗುರುದೀಪ್ ಸಿಂಗ್(26) ಬಂಧಿತ ಆರೋಪಿ. ಯುವತಿಯೊಬ್ಬರು ನೀಡಿದ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಹೋಟೆಲ್ ಮ್ಯಾನೇಜ್​ಮೆಂಟ್​ನಲ್ಲಿ ಪದವಿ ಪಡೆದಿದ್ದ ಗುರುದೀಪ್ ಸಿಂಗ್, ಕೆಲಸ ಹುಡುಕಿಕೊಂಡು ಪಂಜಾಬ್‌ನಿಂದ ನಗರಕ್ಕೆ ಬಂದು, ಕೆ.ಆರ್‌. ಪುರದಲ್ಲಿ ಅಣ್ಣನ ಜತೆಗೆ ವಾಸ ಮಾಡುತ್ತಿದ್ದ. ನಗರದ ವಿವಿಧೆಡೆ ಸಂಚರಿಸುವಾಗ ಮಹಿಳೆಯರ ಫೋಟೊ ಮತ್ತು ವಿಡಿಯೊ ಮಾಡಿ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದ. ಇದನ್ನು ಗಮನಿಸಿದ್ದ ಯುವತಿ, ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

‘ಇನ್‌ಸ್ಟಾಗ್ರಾಂನ @indianwalk1M ಹೆಸರಿನ ಖಾತೆಯ ಪರಿಶೀಲನೆ ನಡೆಸಿದಾಗ ನಡೆದುಕೊಂಡು ಹೋಗುವ ಮಹಿಳೆಯರ ಮುಂದೆ ಹಾಗೂ ಹಿಂದಿನ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಆ ವಿಡಿಯೊ
ಗಳನ್ನು ಅಪ್‌ಲೋಡ್ ಮಾಡಿದ್ದು ಕಂಡುಬಂದಿತ್ತು. ಖಾತೆಯಲ್ಲಿ ಒಟ್ಟು 45 ವಿಡಿಯೊಗಳಿದ್ದವು. ಎಲ್ಲಾ ವಿಡಿಯೊಗಳನ್ನೂ ಅಳಿಸಿ ಹಾಕಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಬನಶಂಕರಿ ಠಾಣೆಯ ಪಿಎಸ್‌ಐ ಪ್ರವೀಣ್‌ ಹೊಸೂರು ಅವರು ನೀಡಿದ ದೂರು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಅವರು ತಿಳಿಸಿದರು.

‘ನಮ್ಮ ಮೆಟ್ರೊ’ದಲ್ಲೂ ನಡೆದಿತ್ತು ಕೃತ್ಯ: ‘ನಮ್ಮ ಮೆಟ್ರೊ’ದಲ್ಲಿ ಪ್ರಯಾಣಿಸುವ ಮಹಿಳೆಯರ ದೇಹದ ಭಾಗಗಳ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನ metro_chicks(Bangalore metro clicks) ಹೆಸರಿನ ಖಾತೆಯಲ್ಲಿ ಹರಿಯಬಿಟ್ಟಿದ್ದ ಆರೋಪಿ ದಿಗಂತ್​ ಎಂಬಾತನನ್ನು ಬನಶಂಕರಿ ಠಾಣೆಯ ಪೊಲೀಸರು ಕಳೆದ ಮೇನಲ್ಲಿ ಬಂಧಿಸಿದ್ದರು.

1930ಕ್ಕೆ ಕರೆ ಮಾಡಿ ದೂರು ನೀಡಿ

ಮಹಿಳೆಯರ ಘನತೆಗೆ ಧಕ್ಕೆ ತರುವ ವಿಡಿಯೊಗಳು ಅಥವಾ ಖಾತೆಗಳನ್ನು ಆನ್‌ಲೈನ್‌ನಲ್ಲಿ ನೋಡಿದರೆ ತಕ್ಷಣವೇ ಸೈಬರ್ ಸೆಲ್‌ನ 1930ಕ್ಕೆ ಕರೆಮಾಡಿ ಅಥವಾ ವೆಬ್‌ಸೈಟ್: http://cybercrime.gov.in ನಲ್ಲಿ ದೂರು ದಾಖಲಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಕಠಿಣ ಕ್ರಮ

‘ಕೆಲವು ದಿನಗಳ ಹಿಂದೆಯೂ ಈ ರೀತಿಯ ಘಟನೆ ನಡೆದಿತ್ತು. ಕೃತ್ಯ ಎಸಗಿದವರನ್ನು ಬಂಧಿಸುವುದೂ ಸೇರಿ ಎಲ್ಲಾ ಅಗತ್ಯ ಕ್ರಮಗಳನ್ನು ಸರ್ಕಾರ ಜರುಗಿಸಿದೆ. ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.