ADVERTISEMENT

ಬೆಂಗಳೂರು | ಒಳಮೀಸಲಾತಿ ವರದಿ ಶೀಘ್ರ ಸಲ್ಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 16:21 IST
Last Updated 7 ಜುಲೈ 2025, 16:21 IST
ನ್ಯಾ.ನಾಗಮೋಹನ್ ದಾಸ್ ಅವರನ್ನು ಎಚ್. ಆಂಜನೇಯ ನೇತೃತ್ವದ ಮಾದಿಗ ಸಮುದಾಯದ ಮುಖಂಡರ ನಿಯೋಗ ಸನ್ಮಾನಿಸಿತು
ನ್ಯಾ.ನಾಗಮೋಹನ್ ದಾಸ್ ಅವರನ್ನು ಎಚ್. ಆಂಜನೇಯ ನೇತೃತ್ವದ ಮಾದಿಗ ಸಮುದಾಯದ ಮುಖಂಡರ ನಿಯೋಗ ಸನ್ಮಾನಿಸಿತು   

ಬೆಂಗಳೂರು: ಒಳಮೀಸಲಾತಿ ಕಲ್ಪಿಸಲು ದತ್ತಾಂಶ ಸಂಗ್ರಹಕ್ಕಾಗಿ ನಡೆದಿರುವ ಸಮೀಕ್ಷೆಯ ವರದಿಯನ್ನು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಏಕಸದಸ್ಯ ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅವರಿಗೆ ಮಾದಿಗ ಸಮುದಾಯದ ಮುಖಂಡರು ಮನವಿ ಮಾಡಿದರು.

ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದ ಮುಖಂಡರ ನಿಯೋಗ ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

ರಾಜ್ಯದಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯಗಳ ಜನರು ಆದಿ ಕರ್ನಾಟಕ (ಎ.ಕೆ.), ಆದಿ ದ್ರಾವಿಡ (ಎ.ಡಿ.), ಆದಿ ಆಂಧ್ರ (ಎ.ಎ) ಎಂದು ಗುರುತಿಸಿಕೊಂಡಿರುವುದರಿಂದ ಯಾರು ಯಾವ ಸಮುದಾಯ ಎಂಬುದನ್ನು ಗುರುತಿಸಲು ಗೊಂದಲ ಉಂಟಾಗಿತ್ತು. ಅದಕ್ಕಾಗಿ ಸಮೀಕ್ಷೆಯ ಮೂಲಕ ಮೂಲ ಜಾತಿಯನ್ನು ನಮೂದಿಸುವಂತೆ ಮಾಡಲಾಗಿದೆ. ಜೊತೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಿಂದುಳಿಯುವಿಕೆ ಗುರುತಿಸಲು ಗಣತಿ ಮಾಡಲಾಗಿದೆ. ಈ ಸಮೀಕ್ಷೆ ಪೂರ್ಣಗೊಂಡಿದ್ದು, ದೇಶಕ್ಕೇ ಮಾದರಿಯಾಗಿದೆ. ಆಯೋಗವು ದತ್ತಾಂಶದ ಸಮಗ್ರ ವರದಿಯನ್ನು ಶೀಘ್ರ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಪರಿಶಿಷ್ಟ ಜಾತಿಯಲ್ಲಿನ ಎಲ್ಲ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಹಂಚಿಕೆ ಮಾಡಲು ಸಹಕರಿಸಬೇಕು ಎಂದು ಕೋರಿದರು. 

ADVERTISEMENT

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಸಮುದಾಯದ ಮುಖಂಡರಾದ ಕೋಗಿಲು ವೆಂಕಟೇಶ್, ಮುತ್ತುರಾಜು, ದೊಡ್ಡಗುಬ್ಬಿ ಸತೀಶ್, ಅನಿಲ್ ಕೋಟಿ, ದೇವದಾಸ್, ಎಂ. ಶ್ರೀನಿವಾಸ್, ವಕೀಲರಾದ ಮೋಹನ್ ರಾಜ್, ಮಂಜುನಾಥ, ತುಳಸಿರಾಮ್, ಆದಿನಾರಾಯಣಪ್ಪ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.