ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸೇವಾ ಇನ್ ಆಕ್ಷನ್ 40ನೇ ವರ್ಷದ ಸಂಭ್ರಮ ಮತ್ತು ಅಂತರರಾಷ್ಟ್ರೀಯ ಅಂಗವಿಕಲ ದಿನಾಚರಣೆಯ ಅಂಗವಾಗಿ ಅಂಗವಿಕಲರ ಒಳಗೊಳ್ಳುವಿಕೆ ಮತ್ತು ಸುಸ್ಥಿರ ಭವಿಷ್ಯದ ಕುರಿತು ಜಾಗೃತಿ ಮೂಡಿಸಲು ಡಿ.29 ರಂದು ಸೇವೆಗಾಗಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ಇನ್ ಆಕ್ಷನ್ ನಿರ್ದೇಶಕಿ ಮಂಜುಳಾ ನಂಜುಂಡಯ್ಯ ಹೇಳಿದರು.
ಕೋರಮಂಗಲದ ರಂಗಮಂದಿರ ಮೈದಾನದಿಂದ ಬೆಳಿಗ್ಗೆ 9ಕ್ಕೆ ನಡಿಗೆ ಆರಂಭವಾಗಲಿದೆ. ಕರ್ನಾಟಕ ರೆಡ್ಡಿ ಜನಸಂಘ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಮುಕ್ತಾಯವಾಗಲಿದೆ. 1.6 ಕಿ.ಮೀ ದೂರ ಕ್ರಮಿಸಲಾಗುತ್ತಿದ್ದು, ಸುಮಾರು 700 ಜನರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಸದ ತೇಜಸ್ವಿ ಸೂರ್ಯ ನಡಿಗೆಯಲ್ಲಿ ಭಾಗಿಯಾಗಿ, ನಂತರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಚ್.ಎಸ್. ಗೋಪಿನಾಥ್, ಎಚ್‌ಎಸ್‌ಪಿ ನಿರ್ದೇಶಕ ಸುರೇಶ್, ಸಿಬಿಆರ್ ಪ್ರಾದೇಶಿಕ ಸಲಹೆಗಾರರಾದ ಇಂಧುಮತಿ ರಾವ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸೇವಾ ಇನ್ ಆಕ್ಷನ್ ಸಂಸ್ಥೆಯ ಗಾಯತ್ರಿ, ಹರಿಪ್ರಕಾಶ್, ವಿಕಾಸ್ ದೊಯಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.