ADVERTISEMENT

ಉಮಾಶ್ರೀ ಸೇರಿ 15 ಮಂದಿಗೆ 'ಅಂತರರಾಷ್ಟ್ರೀಯ ಮಹಿಳಾ' ಸಾಧಕಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 14:17 IST
Last Updated 19 ಸೆಪ್ಟೆಂಬರ್ 2025, 14:17 IST
ಉಮಾಶ್ರೀ
ಉಮಾಶ್ರೀ   

ಬೆಂಗಳೂರು: ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ನೀಡುವ ‘ಅಂತರರಾಷ್ಟ್ರೀಯ ಮಹಿಳಾ ಸಾಧಕಿ ಪ್ರಶಸ್ತಿ’ಗೆ ನಟಿ ಉಮಾಶ್ರೀ ಸೇರಿ ವಿವಿಧ ಕ್ಷೇತ್ರಗಳ 15 ಮಂದಿ ಆಯ್ಕೆಯಾಗಿದ್ದಾರೆ. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್. ಉಮೇಶ್, ‘2025ನೇ ಸಾಲಿನ ಈ ಪ್ರಶಸ್ತಿಗೆ ಕುಸುಮಾ (ತೋಟಗಾರಿಕೆ), ದೀಕ್ಷಾ ವಿ. (ಶಾಸ್ತ್ರೀಯ ನೃತ್ಯ), ರಜನಿ (ವಿದ್ಯುನ್ಮಾನ ಮಾಧ್ಯಮ), ಸುಶೀಲಾ (ಮುದ್ರಣ ಮಾಧ್ಯಮ), ದೀಪಶ್ರೀ ಎಸ್. (ಶೈಕ್ಷಣಿಕ), ಸಂಜನಾ ಬಾಯ್ (ಶೈಕ್ಷಣಿಕ), ಅನುರಾಧ (ಶಿಕ್ಷಣ), ಡಾ. ಚೈತನ್ಯಾ ಶ್ರೀಧರ್ (ಮನೋವೈದ್ಯಕೀಯ), ಗಾಯತ್ರಿ ಚಂದ್ರಶೇಖರ್ (ಸಮಾಜ ಸೇವೆ), ಅನುಷ್ಕಾ ರೈ (ನಟನೆ), ಅರ್ಚನಾ ಸಿಂಗ್ (ನಟನೆ), ಖುಷ್ಬೂ (ನಟನೆ), ಕೃಪಾ (ಮಾಡೆಲಿಂಗ್) ಹಾಗೂ ಆರ್ಚಿ (ಮಾಡೆಲಿಂಗ್) ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು. 

‘ಅ.5ರಂದು ಮಧ್ಯಾಹ್ನ 3 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.    

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.