ADVERTISEMENT

ಬಿ.ಎಂ.ಶ್ರೀ. ಪ್ರತಿಷ್ಠಾನ: ಗಾಯನ ಸ್ಪರ್ಧೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 26 ಮೇ 2025, 0:35 IST
Last Updated 26 ಮೇ 2025, 0:35 IST
   

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನವು ನಾದಯೋಗಿ ಭೈರವಿ ಕೆಂಪೇಗೌಡ ದತ್ತಿ ಆಶ್ರಯದಲ್ಲಿ 15ರಿಂದ 20 ವರ್ಷದ ಒಳಗಿನವರಿಗೆ ‘ಭೈರವಿ ರಾಗದಲ್ಲಿ ಗಾಯನ ಸ್ಪರ್ಧೆ’ ಹಮ್ಮಿಕೊಂಡಿದೆ.

ಕೆ. ಮೋಹನ್ ದೇವ್ ಆಳ್ವ ಮತ್ತು ಎಂ.ಕೆ. ಶೈಲಜಾ ಆಳ್ವ ಅವರು ಈ ದತ್ತಿ ಸ್ಥಾಪಿಸಿದ್ದಾರೆ. ಸ್ಪರ್ಧೆಯು ಜೂನ್ 8ರಂದು ನಡೆಯಲಿದೆ. ಪ್ರಥಮ ಬಹುಮಾನ ₹4 ಸಾವಿರ, ದ್ವಿತೀಯ ಬಹುಮಾನ ₹3 ಸಾವಿರ ಹಾಗೂ ತೃತೀಯ ಬಹುಮಾನ ₹2 ಸಾವಿರ ನಗದು ಒಳಗೊಂಡಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವವರು ಜೂನ್ 5ರ ಸಂಜೆ 5 ಗಂಟೆಯೊಳಗೆ ಎನ್‌.ಆರ್. ಕಾಲೊನಿಯಲ್ಲಿರುವ ಬಿ.ಎಂ.ಶ್ರೀ. ‍ಪ್ರತಿಷ್ಠಾನದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಅರ್ಜಿಗಳು ಪ್ರತಿಷ್ಠಾನದ ಕಚೇರಿಯಲ್ಲಿ ದೊರೆಯುತ್ತವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಸಂಪರ್ಕಕ್ಕೆ: 9972812127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.