ADVERTISEMENT

ಐಆರ್‌ಸಿಟಿಸಿಯಿಂದ ನೇಪಾಳ ಪ್ರವಾಸ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:24 IST
Last Updated 3 ಅಕ್ಟೋಬರ್ 2019, 19:24 IST

ಬೆಂಗಳೂರು:ಕೇಂದ್ರ ಸರ್ಕಾರಿ ಒಡೆತನದ ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ವಿಶೇಷ ಹವಾನಿಯಂತ್ರಿತ ಪ್ರವಾಸಿ ರೈಲಿನೊಂದಿಗೆ 14 ದಿನಗಳ ಮುಕ್ತಿನಾಥ ದರ್ಶನ ಮತ್ತು ನೇಪಾಳ ಪ್ರವಾಸ ಸೇವೆ ಆರಂಭಿಸಿದೆ.

‘ಮುಕ್ತಿನಾಥ ದರ್ಶನ ಪ್ರವಾಸವು ನಗರದ ವೈಟ್‍ಫೀಲ್ಡ್ ರೈಲ್ವೆ ನಿಲ್ದಾಣದಿಂದ ನೈಮಿಸರಣ್ಯಂ, ಅಯೋಧ್ಯೆ, ಮುಕ್ತಿನಾಥ್, ಕಠ್ಮಂಡು ಸ್ಥಳಗಳನ್ನು ಒಳಗೊಂಡಿದ್ದು, ಪ್ರತಿ ವ್ಯಕ್ತಿಗೆ ₹50,330 ನಿಗದಿ ಪಡಿಸಲಾಗಿದೆ’ ಎಂದುಐಆರ್‌ಸಿಟಿಸಿ ಬೆಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಬಿ.ರಮೇಶ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರು.

‘ನೇಪಾಳ ಪ್ರವಾಸವು ನಗರದ ವೈಟ್‍ಫೀಲ್ಡ್ ರೈಲ್ವೆ ನಿಲ್ದಾಣದಿಂದ ಲಖನೌ, ಲುಂಬಿನಿ, ಕಠ್ಮಂಡು ಸ್ಥಳಗಳನ್ನು ಒಳಗೊಂಡಿದ್ದು, ಪ್ರತಿ ವ್ಯಕ್ತಿಗೆ₹50,600 ದರ ನಿಗದಿ ಪಡಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಏಳು ಹವಾನಿಯಂತ್ರಿತ ಬೋಗಿ ಸೇರಿದಂತೆ ಒಟ್ಟು 11 ಬೋಗಿಗಳನ್ನು ರೈಲು ಒಳಗೊಂಡಿದೆ ಎಂದು ಹೇಳಿದರು. ಬುಕ್ಕಿಂಗ್ ಹಾಗೂ ಮಾಹಿತಿಗಾಗಿ ಪ್ರಾದೇಶಿಕ ಕಚೇರಿ ಬೆಂಗಳೂರು 080–22960014 ಅಥವಾ 9741426474 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.