ಬೆಂಗಳೂರು: ಐಪಿಎಸ್ ಅಧಿಕಾರಿ ಇಶಾ ಪಂತ್ ಅವರನ್ನು ಸಿಐಡಿ ಎಸ್‌ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಇಶಾ ಸೇರಿ ಒಟ್ಟು ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಎಸ್.ರವಿ– ಐಜಿಪಿ ಪೂರ್ವ ವಲಯ, ದಾವಣಗೆರೆ. ಪವನ್ ಪರ್ವೀನ್ ಮಧುಕರ್– ಡಿಐಜಿಪಿ (ನೇಮಕಾತಿ), ಬೆಂಗಳೂರು. ಪಿ.ಕೃಷ್ಣಕಾಂತ್ ಡಿಸಿಪಿ, ಕಾನೂನು ಸುವ್ಯವಸ್ಥೆ, ಹುಬ್ಬಳ್ಳಿ - ಧಾರವಾಡ. ಶ್ರೀನಾಥ್ ಮಹದೇವ್ಜೋಶಿ, ಡಿಸಿಪಿ ಆಗ್ನೇಯ ವಿಭಾಗ ಬೆಂಗಳೂರು.
ವರ್ಗಾವಣೆ
ಆರ್.ಆರ್.ನಗರ ವಲಯದ ಜಂಟಿ ಆಯುಕ್ತ ಬಾಲಶೇಖರ್ ಅವರನ್ನು ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹುದ್ದೆಗೆ ಬೇರೆ ಯಾರನ್ನೂ ನೇಮಿಸಿಲ್ಲ.
ನಿಯೋಜನೆ ಮೇರೆಗೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಕಾರಿ ಸಂಘಗಳ ಜಂಟಿ ನಿಬಂಧಕರಾಗಿ ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.