ADVERTISEMENT

ನಗರದ 16 ಕಡೆಗಳಲ್ಲಿ ಜಲಸ್ಪಂದನ ನಾಳೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 4:13 IST
Last Updated 19 ಫೆಬ್ರುವರಿ 2021, 4:13 IST

ಬೆಂಗಳೂರು: ಜಲಮಂಡಳಿಯು ನಗರದ 16 ಕಡೆಗಳಲ್ಲಿ ಇದೇ 20ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಜಲಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಮತ್ತು ಹೆಚ್ಚುವರಿ ಮುಖ್ಯ ಎಂಜಿನಿಯರ್‌ಗಳ ನೇತೃತ್ವದಲ್ಲಿ ಸಂವಾದ ನಡೆಯಲಿದೆ.

ಬಳಕೆದಾರರು ನೀರು ಪೂರೈಕೆಗೆ ಸಂಬಂಧಿಸಿದ ದೂರುಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. ಜಲಸ್ಪಂದನ ನಡೆಯುವ ಸ್ಥಳಗಳ ಬಗ್ಗೆ ಮಾಹಿತಿಗೆ ಮಂಡಳಿಯ ವೆಬ್‌ಸೈಟ್‌ www.bwssb.gov.in ಸಂಪರ್ಕಿಸಬಹುದು.

ADVERTISEMENT

ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ ಸಂಖ್ಯೆ:22238888, ಸಹಾಯವಾಣಿ 1916 ಹಾಗೂ ವಾಟ್ಸ್‌ಆ್ಯಪ್‌ 87622–28888 ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.