ಬೆಂಗಳೂರು: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಬೆಂಗಳೂರು ಸಹಕಾರ ನಗರದ ಉಜ್ವಲ್ ಎಲ್. ಶಂಕರ್, ರಾಷ್ಟ್ರಮಟ್ಟದಲ್ಲಿ 11ನೇ ರ‍್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸಹಕಾರ ನಗರದ ವೈದ್ಯ ದಂಪತಿ ಡಾ.ಲತಾ– ಡಾ. ಉಮಾಶಂಕರ್ ಅವರ ಮಗನಾದ ಉಜ್ವಲ್ ಸಿಇಟಿಯಲ್ಲಿಯೂ ರಾಜ್ಯಕ್ಕೆ 7ನೇ ರ‍್ಯಾಂಕ್ ಗಳಿಸಿದ್ದರು. ನಾರಾಯಣ ಒಲಿಂಪಿಯಾಡ್ ಸ್ಕೂಲ್‌ನಲ್ಲಿ ಸಿಬಿಎಸ್‌ಇ ಪ್ಲಸ್1, ಪ್ಲಸ್ 2 ಮಾಡಿರುವ ಉಜ್ವಲ್ ಬ್ಯಾಸ್ಕೆಟ್‌ಬಾಲ್ ಸಹಿತ ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಕೂಡ ಪಡೆದಿದ್ದರು. ಕಂಪ್ಯೂಟರ್, ಆರೋಗ್ಯ, ಪರಿಸರ, ಏರೋನಾಟಿಕ್ಸ್, ಬಾಹ್ಯಾಕಾಶ ಮತ್ತು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
‘ರಾಜ್ಯಕ್ಕೆ ಮಾತ್ರವಲ್ಲಿ ಐಐಟಿ ಮುಂಬಯಿ ವಲಯಕ್ಕೂ ಪ್ರಥಮ ಸ್ಥಾನ ಪಡೆದಿದ್ದೇನೆ. ಮುಂಬಯಿ ಐಐಟಿಯಲ್ಲಿ ಕಂಪ್ಯೂಟರ್ ಸೈನ್ ಮಾಡಬೇಕು. ಮುಂದೆ ಉದ್ಯಮಿಯಾಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಉಜ್ವಲ್ ಎಲ್. ಶಂಕರ್ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.