ADVERTISEMENT

ಬೆಂಗಳೂರು | ಆಭರಣ ಪ್ರದರ್ಶನ ಮೇಳ: ನಟಿ ಅಮೃತಾ ಪ್ರೇಮ್ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 17:43 IST
Last Updated 15 ಆಗಸ್ಟ್ 2025, 17:43 IST
<div class="paragraphs"><p>ನಗರದ ಶೆರ್ಟಾನ್‌&nbsp; ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಆಯೋಜಿಸಿರುವ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಟಿ ಅಮೃತಾ ಪ್ರೇಮ್ (ಎಡದಿಂದ ಮೂರನೆಯವರು) ಉದ್ಘಾಟಿಸಿದರು</p></div>

ನಗರದ ಶೆರ್ಟಾನ್‌  ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಆಯೋಜಿಸಿರುವ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಟಿ ಅಮೃತಾ ಪ್ರೇಮ್ (ಎಡದಿಂದ ಮೂರನೆಯವರು) ಉದ್ಘಾಟಿಸಿದರು

   

ಬೆಂಗಳೂರು: ನಗರದ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಆಯೋಜಿಸಿರುವ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಟಿ ಅಮೃತಾ ಪ್ರೇಮ್ ಶುಕ್ರವಾರ ಉದ್ಘಾಟಿಸಿದರು.

ಗೋಲ್ಡನ್ ಕ್ರೀಪರ್ ಸಂಸ್ಥೆ ಸಂಸ್ಥಾಪಕರಾದ ಬಿ.ಎನ್. ಜಗದೀಶ್ ಮತ್ತು ಹೇಮಲತಾ ಜಗದೀಶ್ ಆಯೋಜಿಸಿರುವ ಈ ಮೇಳವು ಆಗಸ್ಟ್‌ 17ರವರೆಗೆ ನಡೆಯಲಿದೆ.

ADVERTISEMENT

ಅಮೃತಾ ಪ್ರೇಮ್ ಮಾತನಾಡಿ, ‘ಗ್ರಾಹಕರ ಅಭಿರುಚಿ ಮತ್ತು ಬಜೆಟ್‌ಗೆ ತಕ್ಕಂತೆ ಬಗೆ ಬಗೆಯ ವಿನ್ಯಾಸದ ಚಿನ್ನ ಮತ್ತು ವಜ್ರದ ಆಭರಣಗಳು ಆಕರ್ಷಿಸುತ್ತವೆ’ ಎಂದರು.

ಆಯೋಜಕ ಬಿ.ಎನ್‌.ಜಗದೀಶ್, ‘ಮದುವೆ ಹಾಗೂ ಶುಭ ಸಮಾರಂಭಗಳಿಗೆ ಆಕರ್ಷಕ ವಿನ್ಯಾಸಗಳ ಆಭರಣಗಳನ್ನು ಗ್ರಾಹಕರು ಖರೀದಿಸಬಹುದು’ ಎಂದರು.  

ಚಿನ್ನ ಮತ್ತು ವಜ್ರದ ಆಭರಣಗಳ ಬಗ್ಗೆ ವಿವರವಾದ ಮಾಹಿತಿ ಒದಗಿಸಲು ಆಭರಣ ಬ್ರ್ಯಾಂಡ್ ಪ್ರತಿನಿಧಿಗಳು ಲಭ್ಯವಿರುತ್ತಾರೆ. 

ಬಿ. ಎನ್. ಆರ್. (ಬೆಂಗಳೂರು), ಗಜರಾಜ್, ಎಂ. ಆರ್. ಕೆ. ಜೀವರ್, ಪ್ರಕಾಶ್ ಜ್ಯುವೆಲ್ಲರ್ಸ್, ಸಿಮ್ಹಾ ಜ್ಯುವೆಲ್ಲರ್ಸ್, ಶ್ರೀಗಣೇಶ್ ಡೈಮಂಡ್ಸ್, ಎಂ. ಪಿ. ಜ್ಯುವೆಲ್ಲರ್ಸ್, ನವರತನ್, ನವರತನ್ ಆ್ಯಂಡ್‌  ಸನ್ಸ್, ಪಂಚಕೇಸರಿ ಬದೇರಾ, ಡೈಮ್ಸ್, ನಿರ್ಮಲ್ ಜ್ಯುವೆಲ್ಲರ್ಸ್, ಆರ್ಟ್ ಇಂಡಿಯಾ, ವರಶ್ರೀ, ರಾಜಿ ಜ್ಯುವೆಲ್ಲರಿ, ಸಂಕೇಶ್ ಸುರಾನಾ, ಸಪ್ತೋಶಿ, ವಿಟ್ರಾಗ್ ಜ್ಯುವೆಲ್ಲರ್ಸ್, ತ್ರಿ ದಿಯಾ, ವಂಡರ್ ಡೈಮಂಡ್ಸ್, ಇಮ್ಮಡಿ ಸಿಲ್ವರ್, ಐರಾ ಬೈ ನವರತಾನ್, ರೂಪಮ್ ಸಿಲ್ವರ್, ಸಾಂಚೀಸ್, ಎಸ್ಮಾ ಸಿಲ್ವರ್, ಸ್ಟೀಲ್ ಔರಾ, ಮದನ್ ಜೆಮ್ಸ್, ಪ್ಯಾಶನ್ ಜ್ಯುವೆಲ್ಲರಿ, ಅರಹಾಂ (ಕೋಲ್ಕತ್ತ), ಸುರಾನಾ ಅವರ ಔರಾ, ಶ್ರೀ ಪರಮಣಿ, ಶ್ರೀಹರಿ ದಿಯೆಜೆಮ್, ಶ್ರಿಯಾನ್ಸ್ (ದೆಹಲಿ), ಸುವರ್ಣರಾಜ್ (ಮುಂಬೈ), ಸೋನಾ (ಸೂರತ್), ಸುನಿಲ್  ಜ್ಯುವೆಲ್ಲರ್ಸ್‌  ಮೇಳದಲ್ಲಿ ಭಾಗವಹಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.