ADVERTISEMENT

ಬೆಂಗಳೂರು: ಜಿತೋ ಜೇವರ್ ಎಕ್ಸ್‌ಪೋ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 22:20 IST
Last Updated 4 ಸೆಪ್ಟೆಂಬರ್ 2025, 22:20 IST
<div class="paragraphs"><p>ಡಿ.ಕೆ.ಶಿವಕುಮಾರ್</p></div>

ಡಿ.ಕೆ.ಶಿವಕುಮಾರ್

   

ಬೆಂಗಳೂರು: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ವತಿಯಿಂದ ದಕ್ಷಿಣ ಭಾರತದ ಅತಿದೊಡ್ಡ ಆಭರಣ ಮತ್ತು ಮದುವೆ, ವಿಶೇಷ ಜೀವನ ಕುರಿತು ಸೆ.5 ರಿಂದ 7ರ ವರೆಗೆ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ‘ಜಿತೋ ಜೇವರ್ ಎಕ್ಸ್ ಪೋ ಆ್ಯಂಡ್ ಬ್ರೈಡಲ್ ಸ್ಟೋರಿ’ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿರೂಪಕಿ ಅನುಶ್ರೀ, ರಾಜ್ಯಸಭಾ ಸದಸ್ಯ ಲಹರ್‌ಸಿಂಗ್‌ ಸಿರೋಯಾ, ಸಂಸದ ಪಿ.ಸಿ.ಮೋಹನ್, ಶಾಸಕರಾದ ಸಿ.ಎನ್. ಅಶ್ವತ್ಥನಾರಾಯಣ, ಎಂ. ಕೃಷ್ಣಪ್ಪ, ಪ್ರಿಯಾಕೃಷ್ಣ ಭಾಗವಹಿಸಲಿದ್ದಾರೆ ಎಂದು ಜೀತೋ ಬೆಂಗಳೂರು ಉತ್ತರ ಅಧ್ಯಕ್ಷ ವಿಮಲ್ ಕಟಾರಿಯಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಜಿತೋ ಅಪೆಕ್ಸ್ ಲೇಡಿಸ್ ವಿಂಗ್, ಜಿತೋ ಕೆಕೆಜಿ ಝೋನ್ ಸಹಯೋಗದಲ್ಲಿ ಮೇಳ ಆಯೋಜಿಸಿದ್ದು, ಒಂದು ಲಕ್ಷ ಚದರಡಿ ಪ್ರದೇಶದಲ್ಲಿ 100ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿದೆ. ದೇಶದ ಪ್ರಮುಖ ಆಭರಣ ಕಂಪನಿಗಳು, ಮದುವೆ ಪರಿಕರ ಪೂರೈಕೆದಾರರು ಒಂದೇ ವೇದಿಕೆಯಲ್ಲಿ ಮದುವೆಗಳಿಗೆ ಅಗತ್ಯವಾಗಿರುವ ಎಲ್ಲ ವಸ್ತುಗಳನ್ನು ಪ್ರದರ್ಶಿಸಲಿದ್ದಾರೆ. ಬಂಗಾರ, ವಜ್ರ, ಪೊಲ್ಕಿ, ಕುಂದನ್, ರತ್ನ, ಬೆಳ್ಳಿಯ ನೂತನ ವಿನ್ಯಾಸಗಳು, ಬ್ರೈಡಲ್ ಉಡುಪುಗಳು – ಲೆಹಂಗಾ, ಸೀರೆ, ಶೇರ್ವಾನಿ,  ಫೋಟೋಗ್ರಫಿಗಳನ್ನು ಕೂಡಾ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿದಿನ ಲಕ್ಕಿ ಡ್ರಾ ಮಾಡುತ್ತಿದ್ದು, ಅದೃಷ್ಟಶಾಲಿಗಳು  ಚಿನ್ನದ ಸರ, ವಜ್ರದ ಉಂಗುರಗಳನ್ನು ಬಹುಮಾನವಾಗಿ ಪಡೆಯಲಿದ್ದಾರೆ. ಕಾರನ್ನು ಬಂಪರ್ ಬಹುಮಾನವಾಗಿ ನೀಡಲಾಗುವುದು ಎಂದರು.

ಜೀತೋ ಪ್ರಧಾನ ಕಾರ್ಯದರ್ಶಿ ವಿಜಯ ಸಿಂಘ್ವಿ ಮಾತನಾಡಿ, ‘ಇದು ಐಶ್ವರ್ಯ, ಸಂಸ್ಕೃತಿ ಮತ್ತು ಕೌಶಲದ ಮಹೋತ್ಸವ. ಪರಂಪರೆ ಮತ್ತು ಆಧುನಿಕತೆಯ ಸಂಗಮವಾಗಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದು ಹೇಳಿದರು.

ಯೋಜನಾ ಸಂಚಾಲಕ ಸುರೇಶ್ ಕುಮಾರ್ ಗನ್ನಾ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.