ADVERTISEMENT

ಜೆಎಸ್‌ಎಸ್‌ನಿಂದ ‘ಔದ್ಯಮಿಕ ಸಂಪರ್ಕ’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 20:14 IST
Last Updated 29 ಡಿಸೆಂಬರ್ 2018, 20:14 IST
ಜಾರ್ಜ್‌ ಫಿಷರ್‌ ಕಾರ್ಯಕ್ರಮ ಉದ್ಘಾಟಿಸಿದರು. ಡೀನ್‌ ಡಿ.ಆರ್‌.ಸ್ವಾಮಿ, ಸಿ.ರಂಗನಾಥಯ್ಯ, ಸಿ.ಜಿ. ಬೆಟಸೂರಮಠ್ ಹಾಗೂ ಕಂಪನಿಯ ಪ್ರತಿನಿಧಿಗಳು ಇದ್ದರು
ಜಾರ್ಜ್‌ ಫಿಷರ್‌ ಕಾರ್ಯಕ್ರಮ ಉದ್ಘಾಟಿಸಿದರು. ಡೀನ್‌ ಡಿ.ಆರ್‌.ಸ್ವಾಮಿ, ಸಿ.ರಂಗನಾಥಯ್ಯ, ಸಿ.ಜಿ. ಬೆಟಸೂರಮಠ್ ಹಾಗೂ ಕಂಪನಿಯ ಪ್ರತಿನಿಧಿಗಳು ಇದ್ದರು   

ಬೆಂಗಳೂರು: ನಗರದ ಜೆಎಸ್‌ಎಸ್‌ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಔದ್ಯಮಿಕ ಸಂಪರ್ಕ (ಇಂಡಸ್ಟ್ರಿ ಕನೆಕ್ಟ್‌) ಕಾರ್ಯಕ್ರಮಶನಿವಾರ ನಡೆಯಿತು.

ಇದರಲ್ಲಿ ಭಾಗವಹಿಸಿದ್ದ 13 ಕೈಗಾರಿಕೆಗಳ ಮುಖ್ಯಸ್ಥರುಜೆಎಸ್‌ಎಸ್‌ ಸಂಸ್ಥೆಯೊಂದಿಗೆ ಕಲಿಕೆಯ ಸಹಯೋಗದ ಕುರಿತ ಒಪ್ಪಂದಗಳಿಗೆ ಸಹಿ ಹಾಕಿದರು. ಇದರಿಂದ ಸಂಶೋಧನೆ, ತರಬೇತಿ ಮತ್ತು ಪ್ರಯೋಗಾಲಯಗಳ ಬಳಕೆಗೆ ನೆರವು ಸಿಗಲಿದೆ.

ಜೆಎಸ್‌ಎಸ್‌ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ್, ‘ಉದ್ಯಮಗಳೊಂದಿಗಿನ ಒಪ್ಪಂದಗಳಿಂದಾಗಿ ತಾಂತ್ರಿಕ ವಿದ್ಯಾಲಯಗಳು ಅಭಿವೃದ್ಧಿ ಹೊಂದುತ್ತವೆ. ಇಂತಹ ಸಹಯೋಗಕ್ಕೆ ಮತ್ತಷ್ಟು ಉದ್ಯಮಗಳು ಮುಂದೆ ಬರಬೇಕು, ಪ್ರೋತ್ಸಾಹ ನೀಡಬೇಕು. ನಮ್ಮ ಸಂಸ್ಥೆ ಇಂತಹ ಉಪಕ್ರಮ ಸದಾ ಸ್ವಾಗತಿಸುತ್ತದೆ’ ಎಂದರು.

ADVERTISEMENT

ಕರ್ನ್ ಲೈಬರ್ ಉದ್ದಿಮೆ ನಿರ್ದೇಶಕ ಜಾರ್ಜ್‌ ಫಿಷರ್, ‘ಇಂತಹ ಕಾರ್ಯಕ್ರಮಗಳು ಎಲ್ಲ ತಾಂತ್ರಿಕ ವಿದ್ಯಾಲಯಗಳಲ್ಲಿ ಆಯೋಜನೆಗೊಳ್ಳಬೇಕು’ ಎಂದರು.

ಜೆಎಸ್‌ಎಸ್‌ನ ತಾಂತ್ರಿಕ ಶಿಕ್ಷಣ ನಿರ್ದೇಶಕ ಸಿ. ರಂಗನಾಥಯ್ಯ, ‘ಉದ್ಯಮ ಕ್ಷೇತ್ರವು ತಾಂತ್ರಿಕ ವಿದ್ಯಾಲಯಗಳ ಜತೆ ಸಂಪರ್ಕ ಇಟ್ಟುಕೊಂಡು, ಸಂಶೋಧನೆಗೆ, ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ಸಹಭಾಗಿತ್ವ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.