ಪೀಣ್ಯ ದಾಸರಹಳ್ಳಿ:‘ಕಕ್ಷಿದಾರನ ನಿರೀಕ್ಷೆಗಳಿಗೆ ತಕ್ಕಂತೆ ಕಾನೂನಿನ ಜ್ಞಾನ, ಪ್ರಕರಣಗಳ ಅಧ್ಯಯನದ ಮೂಲಕ ಅನುಭವ ಪಡೆದುಕೊಂಡು ಉತ್ತಮ ವಕೀಲರಾಗಿ ವೃತ್ತಿಯಲ್ಲಿ ಬೆಳವಣಿಗೆ ಹೊಂದಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ತಿಳಿಸಿದರು.
ಸಿಡೇದಹಳ್ಳಿಯ ಸೌಂದರ್ಯ ಕಾನೂನು ಕಾಲೇಜಿನಲ್ಲಿ 3ನೇ ಅಖಿಲ ಭಾರತ ಅಣಕು ನ್ಯಾಯಾಲಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ಈಗ ತಾಂತ್ರಿಕವಾಗಿ ನಾವು ಎಲ್ಲಾ ಕ್ಷೇತ್ರದಲ್ಲೂ ಸಾಧಿಸಿದ್ದೇವೆ. ಕಾನೂನು ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬೆರಳ ತುದಿಯಲ್ಲೇ ಪ್ರಕರಣಗಳ ಮಾಹಿತಿ ಸಿಗಲಿದೆ. ಆದರೆ, ಪ್ರಕರಣಗಳ ಆಳ ಅಧ್ಯಯನ, ವಿಶ್ಲೇಷಣಾತ್ಮಕ ನೋಟ, ತಜ್ಞರ ಅನುಭವ ಪಡೆದುಕೊಳ್ಳುವುದರಿಂದ ಮಾತ್ರ ಯಶಸ್ವಿ ವಕೀಲರಾಗಬಹುದು’ ಎಂದು ಸಲಹೆ ನೀಡಿದರು.
ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೀರ್ತನ್ ಕುಮಾರ್ ಮಾತನಾಡಿ,' ದೇಶದಾದ್ಯಂತ ಕಾನೂನು ಕಾಲೇಜುಗಳಿಂದ 43 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಕೀಲರಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ ಎಂದರು
ತುಮಕೂರು ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಎನ್.ಸತೀಶ್‌ಗೌಡ, ಸರ್ಕಾರಿ ವಕೀಲ ಎಸ್.ಎಸ್. ಮಹೇಂದ್ರ, ಡಿ.ಎಂ. ಹೆಗಡೆ, ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ ಹಾಜರಿದ್ದರು.
ಸಂವಿಧಾನವನ್ನು ಮೊದಲು ನೀವು ಪಾಲನೆ ಮಾಡಿ. ದೇಶದ ಒಳಿತಿಗೆ ಮೌಲ್ಯ ಸಂಸ್ಕೃತಿಯನ್ನು ಕಾಪಾಡಿ. ನಿಮ್ಮ ತಂದೆ ತಾಯಿಯನ್ನು ಗೌರವಿಸಿಇ ಎಸ್ ಇಂದ್ರೇಶ್ ನ್ಯಾಯಮೂರ್ತಿ ಕರ್ನಾಟಕ ಉಚ್ಚ ನ್ಯಾಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.