ಕನಕದಾಸ
ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ‘ಕಿಶೋರ ಕನಕ ಕಾವ್ಯ ಗಮಕ ಸ್ಪರ್ಧೆ’ಯ ಫಲಿತಾಂಶ ಪ್ರಕಟವಾಗಿದ್ದು, ಉಡುಪಿಯ ಸ್ವಸ್ತಿ ಎಂ. ಭಟ್ ಪ್ರಥಮ ಸ್ಥಾನ ಪಡೆದಿದ್ದಾರೆ.
10ರಿಂದ 15 ವರ್ಷದೊಳಗಿನವರಿಗೆ ಕನಕದಾಸರ ಕಾವ್ಯ ಕುರಿತಂತೆ ಇದೇ 12ರಂದು ಕೇಂದ್ರವು ರಾಜ್ಯಮಟ್ಟದ ಸ್ಪರ್ಧೆ ಹಮ್ಮಿಕೊಂಡಿತ್ತು. ಪ್ರಥಮ ಬಹುಮಾನವು ₹20 ಸಾವಿರ ನಗದು ಒಳಗೊಂಡಿದೆ. ಬೆಂಗಳೂರಿನ ಸುಮೇಧಾ ಸೋಮಯಾಜಿ ದ್ವಿತೀಯ ಬಹುಮಾನ (₹15 ಸಾವಿರ), ಮೈಸೂರಿನ ಚಾರ್ವಿ ಸತೀಶ್ ತೃತೀಯ ಬಹುಮಾನ (₹ 10 ಸಾವಿರ), ಹಾಸನದ ನಾಗಶ್ರೀ ಡಿ.ಎಸ್. ಮತ್ತು ದಕ್ಷಿಣ ಕನ್ನಡದ ಪ್ರಚೇತ್ ರಾಮ್ ಕಜೆ ಸಮಾಧಾನಕರ ಬಹುಮಾನ (ತಲಾ ₹5 ಸಾವಿರ) ಪಡೆದಿದ್ದಾರೆ ಎಂದು ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.