ADVERTISEMENT

ತೆಲುಗು ಯುವಕನಿಂದ ಕನ್ನಡ ಪದಬಂಧ ಆ್ಯ‍ಪ್‌ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 21:24 IST
Last Updated 2 ಮಾರ್ಚ್ 2021, 21:24 IST
ಎನ್‌.ಗೌತಮ್ ಚಂದ್ರ
ಎನ್‌.ಗೌತಮ್ ಚಂದ್ರ   

ಬೆಂಗಳೂರು: ಆಂಧ್ರಪ್ರದೇಶದ ಯುವಕ ಎನ್‌.ಗೌತಮ್ ಚಂದ್ರ ಅವರು ‘ಕನ್ನಡ ಪದಬಂಧ ಆ್ಯಪ್‌’ ಅಭಿವೃದ್ಧಿಪಡಿಸಿದ್ದಾರೆ. ಆ ಮೂಲಕ ವಿಶ್ವದ ವಿವಿಧ ಭಾಗಗಳಲ್ಲಿರುವ ಕನ್ನಡಿಗರಿಗೆ ಕುಳಿತಲ್ಲೇ ಪದಬಂಧಗಳು ದೊರೆಯುವಂತೆ ಮಾಡಿದ್ದಾರೆ.

ಗೌತಮ್‌ ಚಂದ್ರ ಅವರು ದಕ್ಷಿಣ ಕೊರಿಯಾದಲ್ಲಿ ನೆಲೆಸಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾವು ಅಭಿವೃದ್ಧಿಪಡಿಸಿರುವ ‘ಇಂಡಿಕ್‌ ಕ್ರಾಸ್‌ವರ್ಡ್ಸ್‌’ ಮೂಲಕ ಅವರು ಕನ್ನಡ ಪದಬಂಧ ಸೇವೆ ಒದಗಿಸುತ್ತಿದ್ದಾರೆ.

ಅ.ನಾ.ಪ್ರಹ್ಲಾದರಾವ್‌ ಅವರು ಗೌತಮ್‌ಗೆ ಪ್ರತಿದಿನ ಪದಬಂಧ ರಚಿಸಿಕೊಡುತ್ತಿದ್ದಾರೆ. ಗೌತಮ್‌ ಅವರು ತಮ್ಮ ಆ್ಯಪ್‌ ಮೂಲಕ ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಪದಬಂಧಗಳನ್ನೂ ಒದಗಿಸುತ್ತಿದ್ದಾರೆ. ಆಸಕ್ತರು https://indic-crosswords.ndklabs.com/ ಗೆ ಭೇಟಿ ನೀಡಬಹುದು. ವಾಟ್ಸ್‌ಆ್ಯಪ್‌ ಸಂಪರ್ಕಕ್ಕೆ +82 10-94850039 (ವಾಟ್ಸ್ ಅಪ್).

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.