ADVERTISEMENT

ಕನ್ನಡ ಡಿಂಡಿಮ ಪ್ರಶಸ್ತಿ ಪ್ರದಾನ 14ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 19:40 IST
Last Updated 11 ಡಿಸೆಂಬರ್ 2025, 19:40 IST
<div class="paragraphs"><p>ಕನ್ನಡ</p></div>

ಕನ್ನಡ

   

ಬೆಂಗಳೂರು: ಕನ್ನಡ ಡಿಂಡಿಮ ಪ್ರತಿಷ್ಠಾನದ ವತಿಯಿಂದ ಇದೇ 14ರಂದು ಅಗ್ರಹಾರ ದಾಸರಹಳ್ಳಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸಹಸ್ರ ಕಂಠ ಗಾನ ವೈಭವ ಹಾಗೂ ಕನ್ನಡ ಡಿಂಡಿಮ ಪ್ರಶಸ್ತಿ ಪ್ರದಾನ  ಕಾರ್ಯಕ್ರಮ ಆಯೋಜಿಸಲಾಗಿದೆ. 

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುರ್ ಆಶ್ರಮದ ವಿದ್ಯಾ ವಾಚಸ್ಪತಿ ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ‘ಚಲನಚಿತ್ರ ನಟ ಡಾ. ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಕನ್ನಡ ಡಿಂಡಿಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯನ್ನು ಚಿತ್ರನಟ ಶಿವರಾಜ್‌ಕುಮಾರ್‌ ಅವರು ಸ್ವೀಕರಿಸಲಿದ್ದಾರೆ’ ಎಂದು ತಿಳಿಸಿದರು. 

ADVERTISEMENT

‘ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಸುಮಾರು ಮೂರು ಸಾವಿರ ಗಾಯಕರು ಒಂದೇ ವೇದಿಕೆಯಲ್ಲಿ ಕನ್ನಡ ನಾಡ ಗೀತೆಗಳು, ದಾಸರ ಪದಗಳು, ಶಿವಶರಣರ ಹಾಡುಗಳು, ಕಗ್ಗ ತತ್ವ ಪದಗಳು, ಜಾನಪದ ರೈತ ಗೀತೆಗಳನ್ನು ಹಾಡಲಿದ್ದಾರೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.