ADVERTISEMENT

ಕನ್ನಡದ ಮಾತು: ಮಹಿಳೆಯರ ವಾಗ್ವಾದ; ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 16:13 IST
Last Updated 2 ಅಕ್ಟೋಬರ್ 2025, 16:13 IST
ಹಿಂದಿ ಮತ್ತು ಕನ್ನಡ ಮಾತನಾಡುವ ಇಬ್ಬರು ಮಹಿಳೆಯರ ನಡುವೆ ನಡೆದ ವಾಗ್ವಾದದ ವಿಡಿಯೊ ‘ದಿ ಹಾಕ್‌ ಐ‘ ಎಕ್ಸ್‌ ಖಾತೆಯಲ್ಲಿ ಹರಿದಾಡಿದ್ದು, ಅದರ ಚಿತ್ರ.
ಹಿಂದಿ ಮತ್ತು ಕನ್ನಡ ಮಾತನಾಡುವ ಇಬ್ಬರು ಮಹಿಳೆಯರ ನಡುವೆ ನಡೆದ ವಾಗ್ವಾದದ ವಿಡಿಯೊ ‘ದಿ ಹಾಕ್‌ ಐ‘ ಎಕ್ಸ್‌ ಖಾತೆಯಲ್ಲಿ ಹರಿದಾಡಿದ್ದು, ಅದರ ಚಿತ್ರ.   

ಬೆಂಗಳೂರು: ಕನ್ನಡ ಮಾತನಾಡುವ ವಿಚಾರವಾಗಿ ಮಹಿಳೆಯರ ನಡುವೆ ನಡೆದಿರುವ ವಾಗ್ವಾದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

‘The Hawk Eye’ ಎಂಬ ‘ಎಕ್ಸ್‌’ ಖಾತೆಯಲ್ಲಿ ಈ ವಿಡಿಯೊ ಹರಿದಾಡುತ್ತಿದ್ದು, ‘ನಮ್ಮ ಮೆಟ್ರೊ’ ನಿಲ್ದಾಣವೊಂದರ ಟಿಕೆಟ್‌ ಕೌಂಟರ್‌ನಲ್ಲಿ ಈ ಘಟನೆ ನಡೆದಿದೆ.

ಹಿಂದಿ ಮಾತನಾಡುವಂತೆ ಮಹಿಳೆಯೊಬ್ಬರು ಹೇಳಿದಾಗ ಇನ್ನೊಬ್ಬರು ಕನ್ನಡದಲ್ಲಿ ಮಾತನಾಡಲು ಹೇಳುತ್ತಾರೆ. ‘ಹಿಂದಿ’ ಮಹಿಳೆ ‘ಕನ್ನಡ’ದ ಮಹಿಳೆಯನ್ನು ದೂಷಿಸುವುದು, ‘ನೀನು ಸಿದ್ದರಾಮಯ್ಯ ಕಡೆಯವಳಾ’ ಎಂದು ಹಿಯಾಳಿಸುವುದು ನಡೆಯುತ್ತದೆ. ಇಬ್ಬರ ನಡುವೆ ವಾಗ್ವಾದ ಜೋರಾಗಿ ನಡೆದಿದೆ.

ADVERTISEMENT

ಭಾಷಾ ವಿಚಾರವು ವೈಯಕ್ತಿಕ ನಿಂದನೆಗೆ ದಾರಿ ಮಾಡಿಕೊಡಬಾರದು ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.