ADVERTISEMENT

ಬೆಂಗಳೂರು: ನಾಲ್ವರು ವಿದ್ವಾಂಸರಿಗೆ ‘ಕಪಾಲಿಶಾಸ್ತ್ರಿ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:25 IST
Last Updated 5 ಸೆಪ್ಟೆಂಬರ್ 2025, 23:25 IST
ರಾಮಚಂದ್ರ ಜಿ. ಭಟ್ ಕೋಟೆಮನೆ
ರಾಮಚಂದ್ರ ಜಿ. ಭಟ್ ಕೋಟೆಮನೆ   

ಬೆಂಗಳೂರು: ಸಾಕ್ಷಿ ಸಂಸ್ಥೆ ನೀಡುವ ‘ಕಪಾಲಿಶಾಸ್ತ್ರಿ ಸ್ಮಾರಕ ಪ್ರಶಸ್ತಿ’ಗೆ ವಿದ್ವಾಂಸರಾದ ರಾಮಚಂದ್ರ ಜಿ. ಭಟ್ ಕೋಟೆಮನೆ, ಯೋಗೇಶ ವಾಯ್ಕರ್, ಹರಿಹರಪುರ ಶ್ರೀಧರ್ ಹಾಗೂ ಪ್ರೊ. ವಿರೂಪಾಕ್ಷ ವಿ. ಜಡ್ಡಿಪಾಲ್ ‌ಆಯ್ಕೆಯಾಗಿದ್ದಾರೆ. 

ಈ ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಒಳಗೊಂಡಿವೆ. ಭಾರತೀಯ ಸಂಸ್ಕೃತಿ ಪ್ರಸಾರ ಹಾಗೂ ಸಂಶೋಧನೆಯಲ್ಲಿ ನಿರತರಾದ ವಿದ್ವಾಂಸರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ವಿದ್ವಾಂಸ ಟಿ.ವಿ. ಕಪಾಲಿಶಾಸ್ತ್ರಿ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ. 

ರಾಮಚಂದ್ರ ಭಟ್ ಅವರು ಕಳೆದ 50 ವರ್ಷಗಳಿಂದ ವಿದ್ವತ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಚನ್ನೇನಹಳ್ಳಿಯಲ್ಲಿರುವ ವೇದ ಗುರುಕುಲದ ಸ್ಥಾಪಕ ಪ್ರಾಂಶುಪಾಲರಾಗಿದ್ದು, ಪ್ರಸ್ತುತ ಮಾರ್ಗದರ್ಶಕರಾಗಿದ್ದಾರೆ. ಯೋಗೇಶ ವಾಯ್ಕರ್ ಅವರು ವೃತ್ತಿಯಲ್ಲಿ ಮಕ್ಕಳ ತಜ್ಞರಾಗಿದ್ದು, ವೇದ, ಉಪನಿಷತ್, ಭಗವದ್ಗೀತೆ ಕುರಿತು ಅಳವಾದ ಅಧ್ಯಯನ ನಡೆಸಿದ್ದಾರೆ. ಹರಿಹರಪುರ ಶ್ರೀಧ‌ರ್ ಅವರು 15 ವರ್ಷಗಳಿಂದ ಅಗ್ನಿಹೋತ್ರ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಜ್ಜಯಿನಿಯ ಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿ ವಿರೂಪಾಕ್ಷ ವಿ. ಜಡ್ಡಿಪಾಲ್ ಅವರು ವೇದಾಂತ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ.

ಟಿ.ವಿ. ಕಪಾಲಿಶಾಸ್ತ್ರಿಯವರ 140ನೇ ಜನ್ಮವರ್ಷಾಚರಣೆ ಕಾರ್ಯಕ್ರಮವನ್ನು ಇದೇ 7ರಂದು ಬೆಳಿಗ್ಗೆ 11 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

ಯೋಗೇಶ ವಾಯ್ಕರ್
ಹರಿಹರಪುರ ಶ್ರೀಧರ್
ವಿರೂಪಾಕ್ಷ ವಿ. ಜಡ್ಡಿಪಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.