ADVERTISEMENT

ಬಿಜಿಎಸ್‌ ಕಾಲೇಜ್‌: ನೀಲು ಸಿಂಗ್‌ಗೆ 596 ಅಂಕ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:31 IST
Last Updated 18 ಜೂನ್ 2022, 20:31 IST
ಹೊಯ್ಸಳ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 11ನೇ ರ್‍ಯಾಂಕ್‌ ಪಡೆದಿರುವ ವಿದ್ಯಾರ್ಥಿ ಶಬನಮ್‌ ಅವರಿಗೆ ಉಪಪ್ರಾಂಶುಪಾಲ ಗೋಪಾಲ್‌ ಸಿಹಿ ತಿನ್ನಿಸಿದರು. ಪ್ರಾಂಶುಪಾಲ ಗೌರಿಶಂಕರ್‌ ವಿದ್ಯಾರ್ಥಿಗಳು ಇದ್ದಾರೆ
ಹೊಯ್ಸಳ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 11ನೇ ರ್‍ಯಾಂಕ್‌ ಪಡೆದಿರುವ ವಿದ್ಯಾರ್ಥಿ ಶಬನಮ್‌ ಅವರಿಗೆ ಉಪಪ್ರಾಂಶುಪಾಲ ಗೋಪಾಲ್‌ ಸಿಹಿ ತಿನ್ನಿಸಿದರು. ಪ್ರಾಂಶುಪಾಲ ಗೌರಿಶಂಕರ್‌ ವಿದ್ಯಾರ್ಥಿಗಳು ಇದ್ದಾರೆ   

ನೆಲಮಂಗಲ: ದ್ವಿತೀಯ ಪಿಯು ಫಲಿತಾಂಶದಲ್ಲಿ ಸಮೀಪದ ನಗರೂರಿನ ಬಿಜಿಎಸ್‌ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ನೀಲು ಸಿಂಗ್‌ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

ಅಭಿಷೇಕ್‌ ಶ್ರೀರಾಮ್‌, ಸಿಂಚನ 590 ಅಂಕ, ಬಿ.ಆರ್‌.ಹರ್ಷ 587 ಅಂಕ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನಮ್ರತಾ ಹಾಗೂ ಉಮೇಶ್‌ಕುಮಾರ್‌ 588 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ಬಿ.ಬಿ.ಮದನ್‌ 586, ಎಂ.ಎಸ್‌.ಮಂಜುಶ್ರೀ 586, ಬಿ.ವಿ.ದರ್ಶನ್‌ 583, ಎಂ.ಎನ್‌.ಮದನ್‌ 580, ವಾಣಿಜ್ಯ ವಿಭಾಗದ ಸಿ.ದಿವ್ಯಾಶ್ರೀ 584, ಆರ್‌.ಅಕ್ಷಯ್‌ 582, ಎಸ್‌.ಆದಿತ್ಯ 580 ಹೆಚ್ಚು ಅಂಕ ಗಳಿಸಿದ್ದಾರೆ.

ADVERTISEMENT

ಹೊಯ್ಸಳ ಕಾಲೇಜು: ಜಕ್ಕಸಂದ್ರದ ಹೊಯ್ಸಳ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶಬನಮ್‌ 589 ಅಂಕ ಮತ್ತು ವಾಣಿಜ್ಯ ವಿಭಾಗದಲ್ಲಿಸಪ್ನಾ ಸಿರ್ವಿ 590 ಅಂಕ ಗಳಿಸಿ ಗಳಿಸಿದ್ದಾರೆಎಂದು ಪ್ರಾಂಶುಪಾಲ ಗೌರಿಶಂಕರ್‌ ಹರ್ಷ ವ್ಯಕ್ತಪಡಿಸಿದರು. ವಿಜ್ಞಾನ ವಿಭಾಗದ ಪ್ರದೀಪ್‌ 583, ಧನುಷ್‌ 581, ವಾಣಿಜ್ಯ ವಿಭಾಗದ ಸಿ.ಎಚ್‌.ಅನುಷಾ 586 ಹೆಚ್ಚು ಅಂಕ ಗಳಿಸಿದ್ದಾರೆ.

ಒಟ್ಟು 474 ವಿದ್ಯಾರ್ಥಿಗಳಲ್ಲಿ 467 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಟ್ಟು 25 ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ಉಪ ಪ್ರಾಂಶುಪಾಲ ಗೋಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.