ADVERTISEMENT

ವಿಷಬೀಜ ಬಿತ್ತುವ ಮುತಾಲಿಕ್‌ರನ್ನು ಬಂಧಿಸಿ: ಪ್ರತಿಭಟನೆ

ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 19:03 IST
Last Updated 11 ಮೇ 2022, 19:03 IST
ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಫಾದರ್‌ ಸಿರಿಲ್‌ ವಿಕ್ಟರ್, ಫಾದರ್‌ ಸಂತೋಷ್‌, ನೇಥನ್ ಡೇನಿಯಲ್‌ ಚಾರ್ಲ್ಸ್‌, ಬಿಷಪ್‌ ಡೇವಿಡ್‌, ರಘು ಶಾಲೊಮ್‌, ಪ್ರಶಾಂತ್‌ ಅಗೇರ, ರಂಜಿ ಚಾಕೊ ಇದ್ದರು–ಪ್ರಜಾವಾಣಿ ಚಿತ್ರ
ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಫಾದರ್‌ ಸಿರಿಲ್‌ ವಿಕ್ಟರ್, ಫಾದರ್‌ ಸಂತೋಷ್‌, ನೇಥನ್ ಡೇನಿಯಲ್‌ ಚಾರ್ಲ್ಸ್‌, ಬಿಷಪ್‌ ಡೇವಿಡ್‌, ರಘು ಶಾಲೊಮ್‌, ಪ್ರಶಾಂತ್‌ ಅಗೇರ, ರಂಜಿ ಚಾಕೊ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಮೋದ್‌ ಮುತಾಲಿಕ್‌ ಹಾಗೂ ಇತರರನ್ನು ಗೂಂಡಾ ಕಾಯ್ದೆಯ ಅಡಿ ಬಂಧಿಸಬೇಕು’ ಎಂದು ಒತ್ತಾಯಿಸಿಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಸೇರಿದ್ದ ಪ್ರತಿಭಟನಕಾರರು ‘ಕ್ರೈಸ್ತರ ವಿರುದ್ಧ ಅ‍ಪಪ್ರಚಾರ ಮಾಡುತ್ತಿರುವ ಮುತಾಲಿಕ್‌ ಹಾಗೂ ಇತರರನ್ನು ಬಂಧಿಸಿ’, ‘ನೂರಾರು ಪ್ರಕರಣಗಳನ್ನು ಎದುರಿಸುತ್ತಿರುವ ಮುತಾಲಿಕ್‌ ಅವರನ್ನು ಜೈಲಿಗೆ ಹಾಕಿ’, ‘ಕ್ರೈಸ್ತರ ವಿರುದ್ಧ ಆಧಾರರಹಿತವಾಗಿ ಮತಾಂತರದ ಆರೋಪ ಮಾಡುವ ಸ್ವಯಂಘೋಷಿತ ಹಿಂದೂ ಮುಖಂಡರನ್ನು ಬಂಧಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

‘ರಾಜ್ಯದಲ್ಲಿ ಕ್ರೈಸ್ತ ಸಮುದಾಯಕ್ಕೆ ಸೇರಿದವರು ಕೇವಲ 11.30 ಲಕ್ಷ ಮಂದಿ ಇದ್ದಾರೆ. ರಾಜ್ಯ ಸರ್ಕಾರದ ದಾಖಲೆಗಳಲ್ಲೇ ಇದನ್ನು ಉಲ್ಲೇಖಿಸಲಾಗಿದೆ. ಹೀಗಿದ್ದರೂ ಮತಾಂತರದ ಸುಳ್ಳು ಆರೋಪ ಮಾಡಲಾಗುತ್ತಿದೆ. ಒಂದು ವೇಳೆ ಮತಾಂತರ ಆಗಿದ್ದರೆ ಈ ಸಂಖ್ಯೆ 35 ಲಕ್ಷ ದಾಟುತ್ತಿತ್ತು. ಬಿಜೆಪಿಯವರೇ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರು. ಸ್ವಾಮೀಜಿಗಳೂ ಧ್ವನಿ ಎತ್ತುತ್ತಿದ್ದರು. ಮತಾಂತರ ಆಗಿಲ್ಲ ಎಂಬುದು ಗೊತ್ತಿದೆ. ಹೀಗಾಗಿ ಅವರೆಲ್ಲಾ ಸುಮ್ಮನಿದ್ದಾರೆ’ ಎಂದು ಪ್ರತಿಭಟನಕಾರರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.