ADVERTISEMENT

ಮಾರ್ಚ್‌ 12–13ಕ್ಕೆ ಕನ್ನಡ ಸಾಹಿತ್ಯ & ಬೇಸಾಯದ ಬದುಕು ಶಿಬಿರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 16:28 IST
Last Updated 20 ಫೆಬ್ರುವರಿ 2026, 16:28 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮಾರ್ಚ್‌ 12 ಮತ್ತು 13ರಂದು ರಾಮನಗರದ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ‘ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಶೀರ್ಷಿಕೆಯಡಿ ಎರಡು ದಿನಗಳ ಶಿಬಿರ ಹಮ್ಮಿಕೊಂಡಿದೆ.

ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಈ ಶಿಬಿರ ಹಮ್ಮಿಕೊಂಡಿದೆ. 18 ವರ್ಷಗಳು ಮೇಲ್ಪಟ್ಟ ಸಾಹಿತ್ಯಾಸಕ್ತರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. 50 ಶಿಬಿರಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಶಿಬಿರದ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ. ಪ್ರಮಾಣಪತ್ರವನ್ನೂ ವಿತರಿಸಲಾಗುತ್ತದೆ. 

ADVERTISEMENT

ಆಸಕ್ತರು ಮಾರ್ಚ್ 01ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಶಿಬಿರದ ಸೂಚನೆಗಳು ಮತ್ತು ನಿಬಂಧನೆಗಳು ಅಕಾಡೆಮಿ ವೆಬ್‌ಸೈಟ್ https://sahithyaacademy.karnataka.gov.in/ ನಲ್ಲಿ ಲಭ್ಯವಿದೆ. 

ವಿವರಕ್ಕೆ ಕಾರ್ಯಕ್ರಮದ ಸಂಚಾಲಕ ರವಿಕುಮಾರ ಬಾಗಿ (8496849992) ಅಥವಾ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. (9740370473) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.