ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಪಿ.ಕೆ.ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಬರಹಗಾರ ಸಂಪಟೂರು ವಿಶ್ವನಾಥ್ ಮತ್ತು ಸಂಶೋಧಕ ಶ್ರೀವತ್ಸ ಎಸ್. ವಟಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ತಲಾ ₹10 ಸಾವಿರ ನಗದು ಒಳಗೊಂಡಿದೆ. ಟಿ. ಶ್ರೀನಿವಾಸ ಅವರ ಸ್ಮರಣಾರ್ಥ ಬರಹಗಾರ್ತಿ ವರದಾ ಶ್ರೀನಿವಾಸ್ ಅವರು ಈ ದತ್ತಿಯನ್ನು ಕಸಾಪದಲ್ಲಿ ಸ್ಥಾಪಿಸಿದ್ದಾರೆ. ಎಲೆಮರೆಯ ಕಾಯಿಯಂತೆ ಸಾಹಿತ್ಯ ಸೇವೆ ಸಲ್ಲಿಸುವ ಸಾಧಕರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.
2024ನೇ ಸಾಲಿಗೆ ಆಯ್ಕೆಯಾಗಿರುವ ಬೆಂಗಳೂರಿನ ಸಂಪಟೂರು ವಿಶ್ವನಾಥ್ ಅವರ ಐದು ಸಾವಿರಕ್ಕೂ ಅಧಿಕ ಲೇಖನಗಳು ಕನ್ನಡದ ವಿವಿಧ ವಾರ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಶಿಕ್ಷಕರಾಗಿ 36 ವರ್ಷ ಕಾರ್ಯನಿರ್ವಹಿಸಿರುವ ಅವರು, 140ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
2025ನೇ ಸಾಲಿಗೆ ಆಯ್ಕೆಯಾಗಿರುವ ಹಾಸನ ಜಿಲ್ಲೆಯ ಬೇಲೂರಿನ ಶ್ರೀವತ್ಸ ಎಸ್. ವಟಿ, ಪುರಾತತ್ವ ಅಧ್ಯಯನದಲ್ಲಿ ಹಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಛಾಯಾಗ್ರಹಣ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.