ADVERTISEMENT

ಬೆಂಗಳೂರು: ವಿಶ್ವ ಎಂಎಸ್‌ಎಂಇ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 15:49 IST
Last Updated 27 ಜೂನ್ 2023, 15:49 IST
ಕಾಸಿಯಾದಲ್ಲಿ ಮಂಗಳವಾರ ವಿಶ್ವ ಎಂಎಸ್ಎಂಇ ದಿನಾಚರಣೆ ಮಾಡಲಾಯಿತು. ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ, ಎಂಎಸ್‌ಎಂಇ ಸೌಲಭ್ಯ ಕೇಂದ್ರದ ನಿರ್ದೇಶಕ ಶಾಕ್ರೇಟಿಸ್‌ ಇದ್ದರು.
ಕಾಸಿಯಾದಲ್ಲಿ ಮಂಗಳವಾರ ವಿಶ್ವ ಎಂಎಸ್ಎಂಇ ದಿನಾಚರಣೆ ಮಾಡಲಾಯಿತು. ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ, ಎಂಎಸ್‌ಎಂಇ ಸೌಲಭ್ಯ ಕೇಂದ್ರದ ನಿರ್ದೇಶಕ ಶಾಕ್ರೇಟಿಸ್‌ ಇದ್ದರು.   

ಬೆಂಗಳೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಉತ್ತೇಜನಕ್ಕೆ ಮುಂಬರುವ ದಿನಗಳಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಲಾಗುವುದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು.

ವಿಶ್ವ ಎಂಎಸ್ಎಂಇ ದಿನದ ಅಂಗವಾಗಿ ಕಾಸಿಯಾದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಎಸ್‌ಎಂಇ ಸೌಲಭ್ಯ ಕೇಂದ್ರದಲ್ಲಿ ಲಭ್ಯವಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಎಂಎಸ್‌ಎಂಇ ಸೌಲಭ್ಯ ಕೇಂದ್ರದ ನಿರ್ದೇಶಕ ಶಾಕ್ರೇಟಿಸ್‌, ‘ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಮಾತ್ರವಲ್ಲದೆ ರಫ್ತು ಮಾಡುವಲ್ಲಿಯೂ ಎಂಎಸ್ಎಂಇಗಳ ಪಾತ್ರ ದೊಡ್ಡದಿದೆ. ಸಣ್ಣ ಕೈಗಾರಿಕೆಗಳ ಹಿತದೃಷ್ಟಿಯಿಂದ ಉತ್ಪನ್ನಗಳ ಆಧಾರದ ಮೇಲೆ ಐದು ಕ್ಲಸ್ಟರ್ ಸ್ಥಾಪಿಸುವಂತೆ ಕಾಸಿಯಾ ಅಧ್ಯಕ್ಷರಿಗೆ ಹೇಳಿದರು.

ADVERTISEMENT

ಜಂಟಿ ನಿರ್ದೇಶಕ ಎನ್. ಸುರೇಶ್, ವಲಯ ನಿರ್ದೇಶಕ ಶ್ರೀವಾತ್ಸನ್, ಕಾಸಿಯಾ ಉಪಾಧ್ಯಕ್ಷ ಎಂ. ಜಿ. ರಾಜಗೋಪಾಲ್, ನಾಗರಾಜು ಎಸ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.