
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕಥಕ್ ನೃತ್ಯ ಕಲಾವಿದೆ ಹಾಗೂ ನೃತ್ಯ ಗುರು ಚಿತ್ರಾ ವೇಣುಗೋಪಾಲ್ (88) ಅವರು ಶುಕ್ರವಾರ ನಿಧನರಾದರು.
ಮೃತರಿಗೆ ಪುತ್ರಿ, ಪುತ್ರ ಇದ್ದಾರೆ. ಚಿತ್ರಾ ಅವರು ಕಥಕ್ ಗುರು ಮಾಯಾರಾವ್ ಅವರ ಸಹೋದರಿ. ಹರಿಶ್ಚಂದ್ರ ಘಾಟ್ ಚಿತಾಗಾರದಲ್ಲಿ ಶನಿವಾರ ಚಿತ್ರಾ ಅವರ ಅಂತ್ಯಸಂಸ್ಕಾರ ನೆರವೇರಿತು.
ಉಡುಪಿ ಜಿಲ್ಲೆಯ ಹಟ್ಟಿಯಂಗಡಿ ಗ್ರಾಮದ ಚಿತ್ರಾ ಅವರು, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಫೆಲೋಷಿಪ್ ಪಡೆದು ರಷ್ಯಾದ ಬ್ಯಾಲೆ ಪ್ರಕಾರದಲ್ಲಿ ಪರಿಣತಿ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.