ADVERTISEMENT

ಕಳ್ಳರಿದ್ದಾರೆ:ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕಾರಿನ ಕಿಟಕಿ,ಬಾಗಿಲುಗಳು ಭದ್ರವಾಗಿರಲಿ

ರಿಜು ದಿಕ್ಷಿತ್‌ ಫೇಸ್‌ಬುಕ್‌ ವಾಲ್‌ನಿಂದ

​ಪ್ರಜಾವಾಣಿ ವಾರ್ತೆ
Published 18 ಮೇ 2019, 18:28 IST
Last Updated 18 ಮೇ 2019, 18:28 IST
   

ಬೆಂಗಳೂರು: ಸಿಲಿಕಾನ್‌ ನಗರ ಬೆಂಗಳೂರಿನಲ್ಲಿಟ್ರಾಫಿಕ್‌ ಜಾಮ್‌ ಮತ್ತು ಸಿಗ್ನಲ್‌ಗಳಲ್ಲಿ ಕಾರಿನ ಕಿಟಕಿಗಳುಮತ್ತು ಬಾಗಿಲುಗಳನ್ನು ಭದ್ರವಾಗಿ ಹಾಕಿರಬೇಕು ಇಲ್ಲವಾದಲ್ಲಿ ಕಾರಿನಲ್ಲಿರುವ ವಸ್ತುಗಳು ಕಳ್ಳರ ಪಾಲಾಗುತ್ತವೆಎಂದು ರಿಜು ದಿಕ್ಷಿತ್‌ ಕಾರು ಪ್ರಯಾಣಿಕರಿಗೆ ಎಚ್ಚರಿಕೆಯ ಸಂದೇಶವನ್ನು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ರವಾನಿಸಿದ್ದಾರೆ.

ಇನ್ಪೋಸಿಸ್ ಕಂಪೆನಿಯಲ್ಲಿ ಪ್ರಿನ್ಸಿಪಲ್‌ ಕನ್ಸಲ್‌ಟೆಂಟ್‌ ಆಗಿ ಕೆಲಸ ಮಾಡುತ್ತಿರುವ ರಿಜು ದಿಕ್ಷಿತ್‌ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಕಾರುಗಳನ್ನು ನಿಲ್ಲಿಸಿರುವಾಗ ಎಚ್ಚರದಿಂದ ಇರಬೇಕು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರು ಹೀಗೆಬರೆದುಕೊಂಡಿರುವುದಕ್ಕೆಒಂದು ಬಲವಾದ ಕಾರಣವಿದೆ.

ಅಂದು ಗುರುವಾರ (ಮೇ 16), ಸಂಜೆ 6.50, ಸ್ಥಳ: ಫೋರಂಮಾಲ್‌ ಎದುರು (ಹೊಸೂರು ರಸ್ತೆ)...

ADVERTISEMENT

ನಾನು ಕೋರಮಂಗಲ ಕಡೆಯಿಂದ ನಗರದ ಕಡೆಗೆ ಕಾರಿನಲ್ಲಿ ಬರುತ್ತಿದ್ದೆ. ಫೋರಂ ಮಾಲ್‌ ಎದುರಿನ ಸಿಗ್ನಲ್‌ ದಾಟಿದರೂ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದೆ. ನನ್ನ ಕಾರು ರಸ್ತೆಯ ಬಲ ಬದಿಯಲ್ಲಿ ಇತ್ತು. ಎಡ ಭಾಗ, ಹಿಂದೆ ಮತ್ತು ಮುಂದೆ ಸಾಕಷ್ಟು ವಾಹನಗಳು ಇದ್ದವು. ನನ್ನ ಕಾರಿನ ಪಕ್ಕದಲ್ಲೆ ರಸ್ತೆ ವಿಭಜಕವಿತ್ತು. ಈ ವೇಳೆ ವ್ಯಕ್ತಿಯೊಬ್ಬ ನನ್ನ ಕಾರಿನ ಮುಂದೆ ವೇಗವಾಗಿ ನಡೆದುಕೊಂಡಬರುವುದನ್ನು ಗಮನಿಸಿದೆ. ಆತ ರಸ್ತೆ ದಾಟುತ್ತಿರಬೇಕು ಎಂದುಕೊಂಡು ಸುಮ್ಮನಾದೆ. ಆದರೆ ಆ ವ್ಯಕ್ತಿ ವಾಹನಗಳ ಮಧ್ಯೆ ನಿಂತುಕೊಂಡು ಕಾರುಗಳ ಒಳಗೆ ಇಣುಕುವುದನ್ನು ಗಮನಿಸಿದೆ. ಆ ವ್ಯಕ್ತಿಯ ವರ್ತನೆಯನ್ನು ಗಮನಿಸಿದರೆ ಸಹಾಯಕ್ಕಾಗಿ ಬೇಡುವಂತೆ ತೋರುತಿತ್ತು. ಆದರೆ ಆ ವ್ಯಕ್ತಿಯ ನಡೆ ಸಂಶಯಾಸ್ಪದವಾಗಿತ್ತು. ಕೂಡಲೇ ನನ್ನ ಕಾರಿನತ್ತ ಬಂದು ನನ್ನ ಕಡೆ ನೋಡಿದ. ನಾನು ನೋಡಿಯೂ ನೋಡದಂತೆಕುಳಿತಿದ್ದೆ. ನಂತರ ನನ್ನ ಕಾರಿನಿಂದ ದೂರವಾಗಿ ಇತರೆವಾಹನಗಳತ್ತ ನೋಡುತ್ತಿದ್ದ.

ಕೆಲ ಕ್ಷಣದಲ್ಲೇ ಮತ್ತೊಬ್ಬ ವ್ಯಕ್ತಿ ಬಂದ. ಅವನು ಕೂಡ ಮೊದಲ ವ್ಯಕ್ತಿ ನೋಡಿದಂತೆ ನೋಡತೊಡಗಿದ. ನಂತರ ಎದುರು ರಸ್ತೆಯನ್ನು ದಾಟಿಕೊಂಡು ಮೂರನೇ ವ್ಯಕ್ತಿ ಬಂದು ರಸ್ತೆ ವಿಭಜಕದ ಮೇಲೆ ನಿಂತು ಮೊದಲ ವ್ಯಕ್ತಿಗೆ ಸಂಜ್ಞೆ ಮಾಡಿದ. ನಾನು ಇದನ್ನು ಗಮನಿಸಿದೆ. ತಕ್ಷಣವೇ ಮೊದಲ ವ್ಯಕ್ತಿ ನನ್ನ ಕಾರಿನತ್ತ ಬಂದ. ನಾನು ಕೂಡಲೇ ಕಾರಿನ ಕಿಟಿಕಿಗಳು ಮತ್ತು ಬಾಗಿಲುಗಳನ್ನುಭದ್ರವಾಗಿ ಹಾಕಿಕೊಂಡಿರುವುದನ್ನು ಖಚಿತಪಡಿಸಿಕೊಂಡೆ. ಮುಂದೆ ಸ್ವಲ್ಪ ಜಾಗ ಇದುದ್ದರಿಂದ ಮುಂದೆ ಸಾಗಿದೆ.ಆ ವ್ಯಕ್ತಿ ಕಾರಿನ ಕಿಟಕಿಯನ್ನ ತಟ್ಟಿ, ನಂತರ ಬಾಗಿಲನ್ನು ತೆಗೆಯಲು ಪ್ರಯತ್ನಿಸಿದಆದರೆ ಭದ್ರವಾಗಿ ಬಾಗಿಲು ಹಾಕಿರುವುದನ್ನು ಗಮನಿಸಿದ. ನಂತರ ಹಿಂದಿನಬಾಗಿಲಿಗೆ ಮುಷ್ಠಿಯಿಂದ ಗುದ್ದಿದ(ಇದನ್ನು ನಂತರ ಪರಿಶೀಲಿಸಿದೆ). ನನ್ನ ಗಮನವನ್ನು ಬೇರೆ ಕಡೆ ಸೆಳೆದು ಕಳ್ಳತನ ಮಾಡುವುದು ಅವರ ಉದ್ದೇಶವಾಗಿತ್ತು. ಈ ವೇಳೆ ಮೂರನೇ ವ್ಯಕ್ತಿ ನನ್ನ ಬಾಗಿಲ ಬಳಿ, ಎರಡನೇ ವ್ಯಕ್ತಿ ಕಾರಿನ ಎಡಗಡೆಬಾಗಿಲ ಬಳಿ ನಿಂತಿರುವುದನ್ನು ಗಮನಿಸಿದೆ.

ಈ ಸಂದರ್ಭದಲ್ಲಿ ನಾನು ಬಾಗಿಲು ತೆಗೆಯುವುದಾಗಲಿ, ಕಿಟಕಿ ತೆರೆಯುವ ಕೆಲಸವನ್ನು ಮಾಡಲಿಲ್ಲ. ಆ ಮೂವರು ವ್ಯಕ್ತಿಗಳು ನನ್ನ ಕಾರು ತಡೆದು ಕಾರಿನಲ್ಲಿದ್ದ ಪರ್ಸ್‌, ಲ್ಯಾಪ್‌ಟಾಪ್‌ ಬ್ಯಾಗ್ ಕದಿಯುವ ಉದ್ದೇಶವನ್ನು ಹೊಂದಿದ್ದರು ಎಂಬುದು ನನಗೆ ಅರ್ಥವಾಯಿತು. ಸಂಚಾರ ಸುಗಮವಾಗುತ್ತಿದಂತೆ ನಾನು ಮುಂದಕ್ಕೆ ಸಾಗಿದೆ.

ಟ್ರಾಫಿಕ್‌ ಸಿಗ್ನಲ್‌, ಸಂಚಾರ ದಟ್ಟಣೆ ಸಮಯದಲ್ಲಿ ಕಾರಿನ ಕಿಟಕಿಗಳು ಮತ್ತು ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಳ್ಳುವುದನ್ನು ಮರೆಯಬೇಡಿ ಎಂದು ರಿಜು ದಿಕ್ಷಿತ್‌ ಬರೆದುಕೊಂಡಿದ್ದಾರೆ.

ಇಲ್ಲಿಯವರೆಗೂ, 1600ಕ್ಕೂ ಹೆಚ್ಚು ಜನರುರಿಜು ದಿಕ್ಷಿತ್‌ ಅವರ ಪೋಸ್ಟ್‌ ಅನ್ನು ಲೈಕ್‌ ಮಾಡಿದ್ದಾರೆ. 164 ಜನರು ಕಮೆಂಟ್‌ ಮಾಡಿದ್ದು, 1700 ಜನರು ಶೇರ್‌ ಮಾಡಿದ್ದಾರೆ. ಕೆಲವರು ಪೊಲೀಸರಿಗೆ ದೂರು ನೀಡುವಂತೆಯೂ ಅವರಿಗೆ ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.