
ಬೆಂಗಳೂರು: ‘ಹಬ್ಬಗಳೆಂದರೆ ಕೌಟುಂಬಿಕ ಸಮಯ ಮತ್ತು ಮನೆಯ ಅಡುಗೆಯನ್ನು ಸಂಭ್ರಮಿಸುವ ಸುಸಂದರ್ಭ. ಉತ್ತಮವಾದ ಅಡುಗೆ ಎಣ್ಣೆ ಬಳಸುವುದರಿಂದ ಇಡೀ ಕುಟುಂಬದ ಆರೋಗ್ಯ ಸುರಕ್ಷಿತವಾಗಿರಲಿದೆ’ ಎಂದು ಫಿಯೋನಾ ರಾಯಭಾರಿ ನಟಿ ಕೀರ್ತಿ ಸುರೇಶ್ ಅಭಿಪ್ರಾಯಪಟ್ಟರು.
ಫಿಯೋನಾ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಸಂಸ್ಥೆಯು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ತನ್ನ ವ್ಯಾಪಾರ ಪಾಲುದಾರರ ಒಕ್ಕೂಟದೊಂದಿಗೆ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಉತ್ತಮವಾದುದನ್ನೇ ಆಯ್ಕೆ ಮಾಡಿ, ಉತ್ತಮ ಆಹಾರ ಸೇವನೆ ಮಾಡಿ’ ಎನ್ನುವ ಘೋಷವಾಕ್ಯ ನನಗೆ ಇಷ್ಟವಾಯಿತು. ನಿತ್ಯದ ಅಡುಗೆ ಪದಾರ್ಥಗಳ ಆಯ್ಕೆ ಬಗ್ಗೆ ಜಾಗರೂಕರಾಗಿರಬೇಕು’ ಎಂದರು.
ಬಜ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್, ‘ಹಬ್ಬ ಸಂದರ್ಭಗಳಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ಜಾಗೃತರಾಗಿಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.