ADVERTISEMENT

ಬೆಂಗಳೂರು: ಕೇಂದ್ರೀಯ ವಿದ್ಯಾಲಯಕ್ಕೆ ಹುಸಿ ಬಾಂಬ್‌ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 16:47 IST
Last Updated 9 ಜನವರಿ 2026, 16:47 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹೆಬ್ಬಾಳದ ಕೇಂದ್ರೀಯ ವಿದ್ಯಾಲಯಕ್ಕೆ ಗುರುವಾರ ಬಂದಿದ್ದ ಬಾಂಬ್‌ ಬೆದರಿಕೆಯ ಇ–ಮೇಲ್‌ನಿಂದ ವಿದ್ಯಾಲಯದ ಆವರಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ವಿದ್ಯಾಲಯದ ಆವರಣದಲ್ಲಿ ಮೂರು ಆರ್​​ಡಿಎಕ್ಸ್ ಇಡಲಾಗಿದ್ದು ಅವುಗಳು ಸ್ಪೋಟಗೊಳ್ಳಲಿವೆ ಎಂದು ಇ–ಮೇಲ್‌ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಇ–ಮೇಲ್‌ ಪರಿಶೀಲಿಸಿದ ಶಾಲಾ ಸಿಬ್ಬಂದಿ, ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಪ್ರಾಂಶುಪಾಲರು ಪೊಲೀಸರ ಗಮನಕ್ಕೆ ತಂದಿದ್ದರು. ತಕ್ಷಣವೇ ಸ್ಥಳಕ್ಕೆ ತೆರಳಿದ ಸದಾಶಿವನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು.

ADVERTISEMENT

‘ಬಾಂಬ್‌ ಪತ್ತೆ ದಳ, ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತು. ಯಾವುದೇ ಆರ್​ಡಿಎಕ್ಸ್ ಬಾಂಬ್​ ಪತ್ತೆಯಾಗಿಲ್ಲ. ಹುಸಿ ಬಾಂಬ್​ ಬೆದರಿಕೆ ಎಂಬುದು ಕಂಡುಬಂದಿದೆ. ಪ್ರಾಂಶುಪಾಲರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಿಡಿಗೇಡಿಗಳು ಕಳುಹಿಸಿದ್ದ ಇ–ಮೇಲ್‌ ವಿಳಾಸ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಜ.6ರಂದು ಕೋರಮಂಗಲದ ಪಾಸ್‍ಪೋರ್ಟ್‌ ಕಚೇರಿಗೂ ಇದೇ ರೀತಿಯ ಸಂದೇಶವನ್ನು ಕಿಡಿಗೇಡಿಗಳು ಕಳುಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.