ADVERTISEMENT

ಬಾಟಲಿ ಚೂರಿನಿಂದ ಕತ್ತು ಕೊಯ್ದಿದ್ದ ಸ್ನೇಹಿತರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 14:13 IST
Last Updated 15 ಜೂನ್ 2020, 14:13 IST
ಕೃಷ್ಣಮೂರ್ತಿ
ಕೃಷ್ಣಮೂರ್ತಿ   

ಬೆಂಗಳೂರು: ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಣಿ (26) ಎಂಬುವರ ಕೊಲೆ ಪ್ರಕರಣ ಸಂಬಂಧ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಯಾದ ಕೃಷ್ಣಮೂರ್ತಿ ಅಲಿಯಾಸ್ ಬಿರಿಯಾನಿ ಅಪ್ಪಿ (25), ಸಂದೀಪ್ ರೆಡ್ಡಿ ಅಲಿಯಾಸ್ ಕಣ್ಣನ್ (25) ಹಾಗೂ ರೇವಣ ಸಿದ್ದಯ್ಯ (33) ಬಂಧಿತರು.

‘ಬಿರಿಯಾನಿ ಅಂಗಡಿ ಇಟ್ಟುಕೊಂಡಿದ್ದ ಆರೋಪಿ ಕೃಷ್ಣಮೂರ್ತಿಯ ಪತ್ನಿ ತವರಿಗೆ ಹೋಗಿದ್ದರು. ಮದ್ಯದ ಪಾರ್ಟಿ ಮಾಡಲು ಮುಂದಾಗಿದ್ದ ಆತ, ಮಣಿ ಹಾಗೂ ಇತರೆ ಸ್ನೇಹಿತರನ್ನು ಮೇ 31ರಂದು ಮನೆಗೆ ಕರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಪಾರ್ಟಿ ವೇಳೆ ಮಣಿ ಹೆಚ್ಚು ಮದ್ಯ ಕುಡಿದಿದ್ದರು. ಅದೇ ವಿಚಾರವಾಗಿ ಗಲಾಟೆ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮದ್ಯದ ಅಮಲಿನಲ್ಲಿದ್ದ ಆರೋಪಿಗಳು, ಬಿಯರ್ ಬಾಟಲಿಯನ್ನು ಒಡೆದು ಹಾಕಿದ್ದರು. ಅದರ ಚೂರಿನಿಂದಲೇ ಮಣಿ ಕತ್ತು ಕೊಯ್ದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.’

‘ಪ್ರಕರಣದಲ್ಲಿ ಮತ್ತಿಬ್ಬರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.