ADVERTISEMENT

ದಲಿತ ಸಿ.ಎಂ ಆಗದಿರುವುದಕ್ಕೆ ನೋವಿದೆ: ಸಚಿವ ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 18:04 IST
Last Updated 15 ಜನವರಿ 2026, 18:04 IST
<div class="paragraphs"><p>ಮುನಿಯಪ್ಪ</p></div>

ಮುನಿಯಪ್ಪ

   

ಬೆಂಗಳೂರು: ‘ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗದಿರುವುದಕ್ಕೆ ನೋವಿದೆ.‌ ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ’ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲೇ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಇತ್ತು. ಯಾವಾಗ, ಏನು ಆಗಬೇಕು ಎನ್ನುವುದು ಹೈಕಮಾಂಡ್​ಗೆ ಗೊತ್ತಿದೆ. ಮುಖ್ಯಮಂತ್ರಿ ಮಾಡುವ ಸ್ಥಾನದಲ್ಲಿ ಖರ್ಗೆ ಇದ್ದಾರೆ. ನಾವು ಇನ್ನೇನು ಮಾತನಾಡುವುದು’ ಎಂದರು.

ADVERTISEMENT

‘ಶೇ 25ರಷ್ಟು ಇರುವ ಸಮುದಾಯ ಶೇ 75ರಷ್ಟು ಮತಗಳನ್ನು ಕಾಂಗ್ರೆಸ್​ಗೆ ಹಾಕುತ್ತಿದೆ. ಇದೆಲ್ಲವನ್ನೂ ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. 2028ಕ್ಕೆ ಮತ್ತೆ ಅಧಿಕಾರಕ್ಕೆ ಬರುವುದು ನಮ್ಮ ಗುರಿ’ ಎಂದರು.

ಯಾರ ಪರನೂ ಇಲ್ಲ: ರಾಹುಲ್ ಗಾಂಧಿಯನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಹುಲ್ ಗಾಂಧಿ ಇಬ್ಬರ ಜೊತೆಗೂ ಮಾತನಾಡಿದ್ದಾರೆ. ಇದು ಹೈಕಮಾಂಡ್​ಗೆ ಬಿಟ್ಟ ವಿಚಾರ. ನಾನು ಯಾರ ಪರವೂ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.