ADVERTISEMENT

ಮೂತ್ರಪಿಂಡ ಸಮಸ್ಯೆ: ಮಹಿಳೆಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 20:32 IST
Last Updated 23 ಜೂನ್ 2022, 20:32 IST

ಬೆಂಗಳೂರು: ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿದ್ದ38 ವರ್ಷದ ಮಹಿಳೆಗೆ ಇಲ್ಲಿನ ಎನ್‌ಯು ಆಸ್ಪತ್ರೆಯ
ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ನಡೆಸಲಾದಆರೋಗ್ಯ ತಪಾಸಣೆ ವೇಳೆ ಎಡ ಮೂತ್ರಪಿಂಡ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ಎನ್‌ಯು ಆಸ್ಪತ್ರೆಯ ವೈದ್ಯ ಡಾ. ವಿನೋದ್ ಕುಮಾರ್ ನೇತೃತ್ವದ ವೈದ್ಯರ ತಂಡ ರೋಗಿಯ ಸ್ಥಿತಿಯನ್ನು ವಿಶ್ಲೇಷಣೆಗೆ ಒಳಪಡಿಸಿ,ಮೂತ್ರಪಿಂಡ ವನ್ನು ಮೂತ್ರಕೋಶಕ್ಕೆ ಸಂಪರ್ಕಿಸುವ ನಳಿಕೆ ಸಂಕುಚಿತಗೊಂಡಿರುವುದನ್ನು ಗುರುತಿಸಿತು.

ಈ ಸಮಸ್ಯೆಯಿಂದಎಡಭಾಗದ ಮೂತ್ರಪಿಂಡ ದುರ್ಬಲಗೊಂಡಿತ್ತು ಎಂದು ಆಸ್ಪತ್ರೆ ಹೇಳಿದೆ.

ADVERTISEMENT

‘ಈ ಸಮಸ್ಯೆಯಿಂದ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಮತ್ತು ನೋವು ಕಾಣಿಸಿಕೊಳ್ಳುತ್ತಿತ್ತು. ಸ್ತ್ರೀರೋಗ ತಜ್ಞರು ಮಹಿಳೆಯ ಗರ್ಭಾಶಯ ತೆಗೆಯುವ ಸಲಹೆ ನೀಡಿದ್ದರು.

ತಪಾಸಣೆ ನಡೆಸಿದ ಬಳಿಕ ಗರ್ಭಾಶಯ ತೆಗೆದುಹಾಕುವ ಬದಲು, ಎಡ ಮೂತ್ರನಾಳವನ್ನು
ಸರಿಪಡಿಸಿ, ಮೂತ್ರಪಿಂಡ ಉಳಿಸಲು ನಿರ್ಧರಿಸಲಾಯಿತು. ಮೂತ್ರರೋಗ ತಜ್ಞವೈದ್ಯರು ಮತ್ತು ಸ್ತ್ರೀರೋಗ ತಜ್ಞರನ್ನು ಒಳಗೊಂಡ ಎರಡು ತಂಡಗಳು ರೋಗಿಯ ಎಡಮೂತ್ರನಾಳವನ್ನು ಸರಿಪಡಿಸಿ ದೆವು’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

‘ಕೀ ಹೋಲ್ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಮಹಿಳೆ ಬೇಗ ಚೇತರಿಸಿಕೊಂಡರು. ಮಹಿಳೆಯ ಸಮಸ್ಯೆ ಈಗ ಬಗೆಹರಿದಿದೆ’ ಎಂದುಡಾ. ವಿನೋದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.