ADVERTISEMENT

ಜನತೆಯ ಜೀವನಮಟ್ಟ ಸುಧಾರಿಸುವುದೇ ನಮ್ಮ ಗುರಿ: ಸಚಿವ ಕೆ.ಜೆ. ಜಾರ್ಜ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:18 IST
Last Updated 30 ಜನವರಿ 2026, 15:18 IST
ಕೆ.ಜೆ. ಜಾರ್ಜ್
ಕೆ.ಜೆ. ಜಾರ್ಜ್   

ಬೆಂಗಳೂರು: ‘ಕನ್ನಡವೇ ನಮ್ಮ ಉಸಿರು, ನಮ್ಮ ಜೀವ. ರಾಜ್ಯದ ಜನತೆಯ ಜೀವನಮಟ್ಟ ಸುಧಾರಿಸುವುದೇ ನಮ್ಮ ಗುರಿ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಮಾರುತಿ ಸೇವಾ ನಗರದ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಶುಕ್ರವಾರ ನೂತನ ಬಸ್ ತಂಗುದಾಣ ಉದ್ಘಾಟಿಸಿ ಅವರು ಮಾತನಾಡಿದರು.

‘ವರನಟ ಡಾ. ರಾಜಕುಮಾರ್ ಅವರ ಅಭಿಮಾನಿ ನಾನು. ಅವರ ಹೆಸರಿನ ಬಸ್‌ ತಂಗುದಾಣ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

‘ಕಾಚರಕನಹಳ್ಳಿಯಲ್ಲಿ ಕೆರೆ ಅಭಿವೃದ್ದಿ, ಕ್ರೀಡಾಂಗಣ ಮತ್ತು ಆಸ್ಪತ್ರೆ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸರ್ವಜ್ಞರ ಬೃಹತ್ ಪ್ರತಿಮೆ ಸ್ಥಾಪಿಸಲಾಗುವುದು. ನಾಗರಿಕರಿಗೆ ಸಕಲ ಸೌಕರ್ಯ ಒದಗಿಸಲು ಶ್ರಮಿಸುತ್ತಿದ್ದೇವೆ. ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿದರು.

ಡಾ.ರಾಜ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ‘ಕನ್ನಡಕ್ಕೆ ಸೇವೆ ಸಲ್ಲಿಸಿರುವ ಮಹನೀಯರ ನೆನಪನ್ನು ಶಾಶ್ವತಗೊಳಿಸುವ ಕೆಲಸಗಳು ಸಾಗುತ್ತಿರುವುದು ಶ್ಲಾಘನೀಯ’ ಎಂದರು.

ಸಂಘದ ಸದಸ್ಯರಾದ ಡಿ.ಕೆ. ರಾಜು, ವೆಂಕಟೇಶ್, ಅಮರ್, ಮುರಳಿ ಹಾಗೂ ಕಾಂಗ್ರೆಸ್ ಮುಖಂಡ ರಘು ದೇವರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.