ADVERTISEMENT

ನಂದಿನಿ ತುಪ್ಪ, ಬೆಣ್ಣೆ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 20:13 IST
Last Updated 19 ಆಗಸ್ಟ್ 2020, 20:13 IST
ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ. ನಂಜೇಗೌಡ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ  ಬಿ.ಸಿ.ಸತೀಶ್ ಹಾಗೂ ಹಾಲು ಒಕ್ಕೂಟಗಳ ಪ್ರಮುಖರು ನಂದಿನಿ ತುಪ್ಪ ಮತ್ತು ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು
ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ. ನಂಜೇಗೌಡ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ  ಬಿ.ಸಿ.ಸತೀಶ್ ಹಾಗೂ ಹಾಲು ಒಕ್ಕೂಟಗಳ ಪ್ರಮುಖರು ನಂದಿನಿ ತುಪ್ಪ ಮತ್ತು ಇತರ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು   

ಬೆಂಗಳೂರು: ಸ್ವಾತಂತ್ರ್ಯೋತ್ಸವ ಮತ್ತು ಗೌರಿ ಗಣೇಶ ಹಬ್ಬದ ಅಂಗವಾಗಿ ನಂದಿನಿ ತುಪ್ಪ ಮತ್ತು ಬೆಣ್ಣೆ ದರವನ್ನು ಸೆಪ್ಟೆಂಬರ್ 15ರ ತನಕ ಇಳಿಕೆ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ.

ನಂದಿನಿ ತುಪ್ಪ ಪ್ರತಿ ಲೀಟರ್ ದರ ₹490 ಇತ್ತು. ಅದನ್ನು ₹450ಕ್ಕೆ ಇಳಿಸಲಾಗಿದೆ.ನಂದಿನಿ ಬೆಣ್ಣೆ ಪ್ರತಿ ಕೆಜಿ ದರ ₹460 ಇತ್ತು. ₹390ಕ್ಕೆ ಇಳಿಕೆ ಮಾಡಲಾಗಿದೆ.

ನಂದಿನಿ ಕೆನೆ ರಹಿತ ಹಾಲಿನಪುಡಿ ಪ್ರತಿ ಕೆಜಿಗೆ₹295ರಿಂದ₹245ಕ್ಕೆ,ನಂದಿನಿ ಡೈರಿ ವೈಟನರ್ ದರ ಪ್ರತಿ ಕೆಜಿಗೆ ₹285ರಿಂದ ₹235ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದೆ.

ADVERTISEMENT

ನಂದಿನಿ ಕೇಸರ್ ಕುಲ್ಫಿಯನ್ನು ₹10 ದರದಲ್ಲಿ,ನಂದಿನಿ 1 ಕೆಜಿ ತುಪ್ಪವನ್ನು ಟಿನ್ ಪ್ಯಾಕ್ ನಲ್ಲಿ ₹450 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

ಗ್ರಾಹಕರ ಅಭಿರುಚಿ ಮತ್ತು ಬೇಡಿಕೆ ಪರಿಗಣಿಸಿ ನಂದಿನಿ ಪನ್ನಿರ್ ಮತ್ತು ನಂದಿನಿ ಚೀಸ್, ಹಾಲು, ತುಪ್ಪ ಬಳಸಿ ತಯಾರಿಸಿದ 5 ಬಗೆಯ ಬೇಕರಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು.

ಪ್ರತಿ ವರ್ಷದಂತೆ ನಂದಿನಿ ಸಿಹಿ ಉತ್ಸವ ಆಚರಿಸಲಾಗುತ್ತಿದ್ದು, ಆ.30ರವರೆಗೆ ನಡೆಯಲಿದೆ. ಶೇ 10ರ ರಿಯಾಯಾತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಗ್ರಾಹಕರು ಪಡೆಯಬಹುದು ಎಂದು ಕೆಎಂಎಫ್ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.