ADVERTISEMENT

ಕೆ.ಆರ್.ಪುರ: ಸಂವಿಧಾನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 20:38 IST
Last Updated 19 ಫೆಬ್ರುವರಿ 2024, 20:38 IST
ಕೆ.ಆರ್.ಪುರದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು.
ಕೆ.ಆರ್.ಪುರದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು.   

ಕೆ.ಆರ್.ಪುರ: ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಕೆ.ಆರ್.ಪುರದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು.

ಪ್ರಮುಖ ಸ್ಥಳಗಳಲ್ಲಿ ಶಾಲಾ ಮಕ್ಕಳು, ಸಂವಿಧಾನ ಬೋಧಿಸುವ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದರು.

ಕೆ.ಆರ್.ಪುರದಿಂದ ಆರಂಭವಾದ ಜಾಥಾ ತಾಲ್ಲೂಕು ಕಚೇರಿ, ಆನಂದಪುರ, ಟಿ.ಸಿ.ಪಾಳ್ಯ, ಭಟ್ಟರಹಳ್ಳಿ, ಬಸವನಪುರ, ಅಯ್ಯಪ್ಪನಗರ, ದೇವಸಂದ್ರ ಪ್ರಮುಖ ಮುಖ್ಯರಸ್ತೆಗಳಲ್ಲಿ ಸಾಗಿತು. 75ನೇ ಸಂವಿಧಾನ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ಏಕತಾ ಸಮಾವೇಶ ಅಂಗವಾಗಿ ಮತ್ತು ಸ್ತಬ್ದಚಿತ್ರದೊಂದಿಗೆ ಮೆರವಣಿಗೆ ನಡೆಸಿದರು.

ADVERTISEMENT

ಬಿಬಿಎಂಪಿ ಎಇಇ ವಿನಯ್ ಮಾತನಾಡಿದರು. ಇಇ ಚನ್ನಬಸಪ್ಪ, ಎಇ ಜಾದವ್, ಕೇಶವ್, ದಮನಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಸಾಮ್ರಾಟ್ ಶೇಖರ್, ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಅಂಥೋಣಿಸ್ವಾಮಿ, ರುದ್ರೇಶ್, ಮುರುಳಿ, ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.