ADVERTISEMENT

₹ 20 ಕೋಟಿ ವೆಚ್ಚದಲ್ಲಿ ಭವ್ಯವಾದ ದೇವಾಲಯ ನಿರ್ಮಾಣ: ಬೈರತಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:56 IST
Last Updated 10 ಜೂನ್ 2022, 19:56 IST
ಶ್ರೀಮಹಾಬಲೇಶ್ವರಸ್ವಾಮಿ ಮತ್ತು ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ‌ ದೇವಸ್ಥಾನದ ಜೀರ್ಣೋದ್ಧಾರದ ಶಂಕುಸ್ಥಾಪನೆಯನ್ನು ಸಚಿವ ಬೈರತಿ ಬಸವರಾಜ ಭೂಮಿಪೂಜೆಯ ಮೂಲಕ ನೆರವೇರಿಸಿದರು. ಪಾಲಿಕೆ ಮಾಜಿ ಸದಸ್ಯ ಅಂತೋಣಿಸ್ವಾಮಿ, ಮುಖಂಡರಾದ ವೇಣುಗೋಪಾಲ, ಬಿಟಿಎಸ್ ಪ್ರಕಾಶ್, ಕೆ.ಪಿ.ಕೃಷ್ಣ, ಶಿವಪ್ಪ, ರವಿಕುಮಾರ್ ಇದ್ದರು.

ಕೆ.ಆರ್.ಪುರ: ಇತಿಹಾಸ ಪ್ರಸಿದ್ಧ ಕೆ.ಆರ್.ಪುರದ ವೆಂಗಯ್ಯನಕೆರೆ ಬಳಿ ನೆಲೆಸಿರುವ ಶ್ರೀ ಮಹಾಬಲೇಶ್ವರಸ್ವಾಮಿ ಮತ್ತು ಶ್ರೀ ಲಕ್ಷ್ಮಿನಾರಾಯಣಸ್ವಾಮಿ‌ ದೇವಸ್ಥಾನ ಜೀರ್ಣೋದ್ಧಾರಕ್ಕೆ ನಗರಾಭಿವೃದ್ಧಿ ಸಚಿವ ಸಚಿವ ಬೈರತಿ ಬಸವರಾಜ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಸಚಿವ ಬೈರತಿ ಬಸವರಾಜ, ‘₹20 ಕೋಟಿ ವೆಚ್ಚದಲ್ಲಿ ಭವ್ಯವಾದ ದೇವಾಲಯ ನಿರ್ಮಾಣ ಮಾಡಲಾಗುವುದು.
ಕ್ಷೇತ್ರದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಈ ದೇವಾಲಯವು ವಿಶೇಷವಾಗಿದ್ದು, ದೇವಾಲಯದ ಅಭಿವೃದ್ಧಿಗೆ ದಾನಿಗಳು ಸಹಕಾರ ನೀಡಬೇಕು’ ಎಂದು ಹೇಳಿದರು.

ದೇವಸ್ಥಾನದ ಸಮಿತಿ ಅಧ್ಯಕ್ಷ ಶ್ರೀನಿವಾಸರಾಜು ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ, ಮುಖಂಡರಾದ ವೇಣುಗೋಪಾಲ, ಬಿಟಿಎಸ್ ಪ್ರಕಾಶ್, ಕೆ.ಪಿ.ಕೃಷ್ಣ, ಶಿವಪ್ಪ, ರವಿಕುಮಾರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.