ADVERTISEMENT

ಕೆ.ಆರ್.ಪುರ: ಚಿಕ್ಕದೇವಸಂದ್ರದಲ್ಲಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 16:21 IST
Last Updated 20 ಅಕ್ಟೋಬರ್ 2025, 16:21 IST
ಶ್ರೀದೊಡ್ಡಮ್ಮದೇವಿ ಆವರಣದಲ್ಲಿ ದೀಪೋತ್ಸವ ನಡೆಯಿತು
ಶ್ರೀದೊಡ್ಡಮ್ಮದೇವಿ ಆವರಣದಲ್ಲಿ ದೀಪೋತ್ಸವ ನಡೆಯಿತು   

ಕೆ.ಆರ್.ಪುರ: ದೀಪಾವಳಿ ಹಬ್ಬದ ಪ್ರಯುಕ್ತ ಚಿಕ್ಕದೇವಸಂದ್ರ ಗ್ರಾಮದ ಶ್ರೀದೊಡ್ಡಮ್ಮದೇವಿ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರತಿ ವರ್ಷವೂ ವಿಭಿನ್ನವಾಗಿ ಹಮ್ಮಿಕೊಳ್ಳಲಾಗುವ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಕಲ್ಯಾಣಿ ನಿರ್ಮಾಣ ಮಾಡಿ ದೀಪಗಳನ್ನು ಬೆಳಗಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ಚಿಕ್ಕದೇವಸಂದ್ರ ಗ್ರಾಮದಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳಲಾಗುವ ದೀಪೋತ್ಸವ ವಿಶೇಷವಾಗಿರುತ್ತದೆ’ ಎಂದು ಹೇಳಿದರು.

ADVERTISEMENT

ಗ್ರಾಮದ ಮುಖಂಡರಾದ ಡಿ.ಎಂ.ನಾಗರಾಜ್, ಮುನಿವೆಂಕಟಪ್ಪ, ಆಂಧ್ರ ಬ್ಯಾಂಕ್ ತಿಮ್ಮಣ್ಣ, ಡಿ.ಎಚ್.ರಮೇಶ್, ಎಂ.ರವಿಕುಮಾರ್, ನಾಗರಾಜ್ ಪೇಂಟರ್, ಲಾರಿಚಂದ್ರು, ಮೇಸ್ತ್ರಿ ಗೋವಿಂದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.