ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಕೆ.ಆರ್.ಪುರ: ಸಾಲ ವಾಪಸ್ ನೀಡದ ಕಾರಣ ಬ್ಯಾಂಕ್ ಸಿಬ್ಬಂದಿ ಮನೆ ಜಪ್ತಿ ಮಾಡುವ ವೇಳೆ, ಒತ್ತಡಕ್ಕೆ ಒಳಗಾದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಹದೇವಪುರ ಠಾಣೆ ವ್ಯಾಪ್ತಿಯ ಮಹೇಶ್ವರಿನಗರದಲ್ಲಿ ನಡೆದಿದೆ.
ಮಹೇಶ್ವರಿನಗರದ ನಿವಾಸಿ ಆನಂದ್ ವೇಲನ್ (63) ಮೃತ ವ್ಯಕ್ತಿ. ಸಣ್ಣ ಉದ್ಯಮ ನಡೆಸುವ ಸಲುವಾಗಿ ರಾಜಾಜಿನಗರದ ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್‌ನಲ್ಲಿ 2017ರಲ್ಲಿ ₹30 ಲಕ್ಷ ಸಾಲ ಪಡೆದಿದ್ದರು. ₹27 ಲಕ್ಷ ಸಾಲ ಪಾವತಿ ಮಾಡಿದ್ದರು. ಬಾಕಿ ಹಣ ಪಾವತಿ ಮಾಡಿರಲಿಲ್ಲ. ಬ್ಯಾಂಕ್ ಸಿಬ್ಬಂದಿ ಮನೆ ಜಪ್ತಿ ಮಾಡಲು ಮುಂದಾದಾಗ ಅಘಾತಕ್ಕೆ ಒಳಗಾದ ಆನಂದ್ ಸ್ಥಳದಲ್ಲಿಯೇ ಕುಸಿದು ಬಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಅವರು ಮೃತಪಟ್ಟರು.
‘ಡಿಸಿಬಿ ಬ್ಯಾಂಕ್ ಸಿಬ್ಬಂದಿ ನೋಟಿಸ್ ನೀಡದೆ ಮನೆ ಜಪ್ತಿ ಮಾಡಲು ಬಂದಿದ್ದರು. ಇದರಿಂದ ಆಘಾತಕ್ಕೆ ಒಳಗಾದ ತಂದೆ ಸ್ಥಳದಲ್ಲಿಯೇ ಕುಸಿದು ಬಿದ್ದರು. ಬ್ಯಾಂಕ್ ಸಿಬ್ಬಂದಿ ಸಹಾಯಕ್ಕೆ ಬಾರದೆ ಮನೆಯಿಂದ ತೆರಳಿದರು. ತಂದೆ ಸಾವಿಗೆ ಬ್ಯಾಂಕ್ ಸಿಬ್ಬಂದಿಯೇ ಕಾರಣ’ ಎಂದು ಆನಂದ್ ವೇಲನ್ ಕುಟುಂಬದವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.