ADVERTISEMENT

ರಸ್ತೆ ಅಗೆದು ಹಾಗೇ ಬಿಟ್ಟರು

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:38 IST
Last Updated 5 ಜೂನ್ 2019, 19:38 IST
ಕೆ.ಚನ್ನಸಂದ್ರದಿಂದ ಹೊರಮಾವು ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಂಡಗಳು ಬಿದ್ದಿದೆ.
ಕೆ.ಚನ್ನಸಂದ್ರದಿಂದ ಹೊರಮಾವು ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಂಡಗಳು ಬಿದ್ದಿದೆ.   

ಕೆ.ಆರ್.ಪುರ: ಕೆ.ಚನ್ನಸಂದ್ರದಿಂದ ಹೊರಮಾವು ಹೊರವರ್ತುಲ ರಸ್ತೆ ಮೂಲಕ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಯೋಜನೆಯ ಕಾಮಗಾರಿಯನ್ನು ಒಂದೂವರೆ ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಇದಕ್ಕಾಗಿ ಕೆ.ಚನ್ನಸಂದ್ರದಿಂದ ಹೊರಮಾವು ವರ್ತುಲ ರಸ್ತೆಯವರೆಗೆ ರಸ್ತೆಯನ್ನು ಅಗೆಯಲಾಗಿತ್ತು. ಕಾಮಗಾರಿ ಮುಗಿದಿದ್ದರೂ ರಸ್ತೆಯನ್ನು ಮರುನಿರ್ಮಾಣ ಮಾಡಿಲ್ಲ. ಇದರಿಂದಾಗಿ, ಪ್ರತಿ ಬಾರಿ ಮಳೆ ಸುರಿದಾಗಲೆಲ್ಲಾ ಗುಂಡಿಗಳು ನಿರ್ಮಾಣವಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳಿಗೆ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

‘ಸುಮಾರು ಮೂರು ಕಿ.ಮಿ. ರಸ್ತೆಯಲ್ಲಿ ಗುಂಡಿಗಳು ಎದ್ದಿವೆ’ ಎಂದು ವಾಹನ ಸವಾರ ಸೀತಾರಾಮ್ ಚವ್ಹಾಣ್ ಹೇಳಿದರು.

ADVERTISEMENT

‘ಇಲ್ಲಿಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಕಲ್ಕೆರೆ ಗ್ರಾಮದ ನಿವಾಸಿ ಮಹೇಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.