ADVERTISEMENT

ಒಂದೇ ದಿನ 7.16 ಲಕ್ಷ ಜನ: ಕೃಷಿ ಮೇಳಗಳಲ್ಲೇ ದಾಖಲೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 20:28 IST
Last Updated 5 ನವೆಂಬರ್ 2022, 20:28 IST
ನಗರದ ಜೆಕೆವಿಕೆಯಲ್ಲಿ ಶನಿವಾರ ನಡೆದ ಕೃಷಿ ಮೇಳದಲ್ಲಿ ಜನರು ಮತ್ತು ರೈತರು ಟ್ರ್ಯಾಕ್ಟರ್ ಗಳನ್ನು ವೀಕ್ಷಿಸುತ್ತಿರುವ ದೃಶ್ಯ  –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ನಗರದ ಜೆಕೆವಿಕೆಯಲ್ಲಿ ಶನಿವಾರ ನಡೆದ ಕೃಷಿ ಮೇಳದಲ್ಲಿ ಜನರು ಮತ್ತು ರೈತರು ಟ್ರ್ಯಾಕ್ಟರ್ ಗಳನ್ನು ವೀಕ್ಷಿಸುತ್ತಿರುವ ದೃಶ್ಯ  –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಕೃಷಿ ಮೇಳದ ನಡೆದ ಜಿಕೆವಿಕೆ ಆವರಣಕ್ಕೆ ಶನಿವಾರ ಜನಸಾಗರವೇ ಹರಿದುಬಂದಿತ್ತು. ಇದೇ ಮೊದಲ ಬಾರಿಗೆ ಕೃಷಿ ಮೇಳವು ದಾಖಲೆ ಬರೆಯಿತು.

ಶನಿವಾರ 7.16 ಲಕ್ಷ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೃಷಿ ಮೇಳ ವೀಕ್ಷಿಸಿದರು. ಕೃಷಿ ಮೇಳದ ಇತಿಹಾಸದಲ್ಲಿ ಇಷ್ಟು ಸಂಖ್ಯೆಯ ರೈತರು ಒಂದೇ ದಿನ ಭಾಗವಹಿಸಿದ್ದು ಇದೇ ಮೊದಲು ಎಂದು ವಿವಿ ತಿಳಿಸಿದೆ.

12,500 ಜನರು ಕೃಷಿ ವಿಶ್ವವಿದ್ಯಾಲಯದ ರಿಯಾಯಿತಿ ದರದಲ್ಲಿ ಊಟ ಸವಿದರು. ಮೇಳದಲ್ಲಿ ₹ 2.85 ಕೋಟಿಯ ವಹಿವಾಟು ನಡೆದಿದೆ. 684 ರೈತರು ಸಲಹಾ ಕೇಂದ್ರದಿಂದ ಮಾಹಿತಿಯನ್ನು ಪಡೆದುಕೊಂಡರು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.