ADVERTISEMENT

ಆರ್‌.ಆರ್‌. ನಗರ: ಕೃಷ್ಣಪ್ಪ ಲೇಔಟ್‌ ಅವ್ಯವಸ್ಥೆಯ ಆಗರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 15:49 IST
Last Updated 2 ಜೂನ್ 2025, 15:49 IST
ಕೃಷ್ಣಪ್ಪ ಲೇಔಟ್‌ನ ಚರಂಡಿಯಲ್ಲಿ ಖಾಲಿ ಪ್ಲಾಸ್ಟಿಕ್‌ ಬಾಟಲ್‌, ಕಸಕಡ್ಡಿಗಳು ತುಂಬಿಕೊಂಡಿವೆ
ಕೃಷ್ಣಪ್ಪ ಲೇಔಟ್‌ನ ಚರಂಡಿಯಲ್ಲಿ ಖಾಲಿ ಪ್ಲಾಸ್ಟಿಕ್‌ ಬಾಟಲ್‌, ಕಸಕಡ್ಡಿಗಳು ತುಂಬಿಕೊಂಡಿವೆ   

ರಾಜರಾಜೇಶ್ವರಿನಗರ: ಮೊಳದುದ್ದದ ಗುಂಡಿಗಳು, ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಕಾಣದೇ ಬೀಳುವ ಬೈಕ್ ಸವಾರರು, ಚರಂಡಿ ನೀರು ಸಹಿತ ಮನೆಗೆ ನುಗ್ಗುವ ಮಳೆ ನೀರು, ಬಡಾವಣೆಯ ಅಲ್ಲಲ್ಲಿ ಕಸದ ರಾಶಿ..

ಇದು ಆರ್.ಆರ್.ನಗರ ವಾರ್ಡ್‌ನ ಕೃಷ್ಣಪ್ಪ ಬಡಾವಣೆಯ ಸದ್ಯದ ಸ್ಥಿತಿ.

ಕೃಷ್ಣಪ್ಪ ಲೇಔಟ್‌ನ ಪ್ರಮುಖ ರಸ್ತೆ(ಆರ್‌.ಆರ್‌. ನಗರದಿಂದ ಪದ್ಮನಾಭನಗರ ಜಯನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ) ಗುಂಡಿಗಳಿಂದ ತುಂಬಿದೆ. ಮಳೆ ಬಂದಾಗ ಈ ರಸ್ತೆಯ ಮೇಲೆ ಹರಿಯುವ ನೀರು ಪಕ್ಕದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗುವುದರಿಂದ ನಿವಾಸಿಗಳು ನರಕಯಾತನೆ ಅನುಭವಿಸಬೇಕಾಗಿದೆ’ ಎಂದು ಸ್ಥಳೀಯರು ಬೇಸರ‌‌ದಿಂದ ನುಡಿಯುತ್ತಾರೆ.

ADVERTISEMENT

‘ಬಡಾವಣೆಯ ಮುಖ್ಯರಸ್ತೆ ಹಾಗೂ ಅಡ್ಡ ರಸ್ತೆಗಳ ಬದಿಯಲ್ಲಿನ ಚರಂಡಿಗೆ  ಕಸಕಡ್ಡಿ, ಪ್ಲಾಸ್ಟಿಕ್ ಬಾಟಲ್‌ಗಳನ್ನು ತುಂಬುತ್ತಾರೆ. ಮಳೆಗಾಲದಲ್ಲಿ ಚರಂಡಿಯಲ್ಲಿ ಮಳೆ ನೀರು ಹರಿಯದೇ, ರಸ್ತೆ ಮೇಲೆ ಹರಿಯುತ್ತದೆ. ಚರಂಡಿ ಯಾವುದು, ರಸ್ತೆ ಯಾವುದು ಎಂದು ಗೊತ್ತಾಗುವುದಿಲ್ಲ‘ ಎಂದು ಸ್ಥಳಿಯ ನಿವಾಸಿ ರಾಧ ಅವರು ಹೇಳಿದರು.

‘ಪಾದಚಾರಿ ಮಾರ್ಗ ಕಿತ್ತುಹೋಗಿದೆ. ಚರಂಡಿ, ಮೋರಿಯ ಮೇಲಿನ ಕಲ್ಲುಗಳು ಒಡೆದುಹೋಗಿವೆ. ಮಳೆ ಬಂದಾಗ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತವೆ. ರಸ್ತೆ ಕೊಳಚೆನೀರಿನ ಹೊಳೆಯಾಗುತ್ತದೆ. ವಾಹನ ಸವಾರರು, ಪಾದಚಾರಿಗಳು ರಸ್ತೆಯಲ್ಲಿ ನಡೆಯುವುದು ದುಸ್ಥರವಾಗಿದೆ" ಎಂದು ನಾಗರೀಕರು ದೂರುತ್ತಾರೆ.

‘ಬಡಾವಣೆಯಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಒಮ್ಮೆಯೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಗಮನಹರಿಸಿಲ್ಲ’ ಎಂದು ದೂರಿದರು.

ಕೃಷ್ಣಪ್ಪ ಲೇಔಟ್ ಸಮಸ್ಯೆ ಕುರಿತು ಪ್ರತಿಕ್ರಿಯೆಗಾಗಿ ಆರ್‌ಆರ್‌ ನಗರದ ಬಿಬಿಎಂಪಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿನ ಯ್ಅವರನ್ನು ಸಂಪರ್ಕಿಸಲು ಕರೆ ಮಾಡಿದಾಗ, ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಮುಖ್ಯರಸ್ತೆಯಲ್ಲಿನ ಗುಂಡಿ
ಪಾದಚಾರಿ ಮಾರ್ಗ ಕಿತ್ತುಹೋಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.