ಸಾವು
(ಪ್ರಾತಿನಿಧಿಕ ಚಿತ್ರ)
ಕೆ.ಆರ್.ಪುರ: ಹೈಟೆನ್ಷನ್ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಬಾಲಕ ಅನಂತ್(10) ಚಿಕಿತ್ಸೆ ಫಲಕಾರಿಯಾಗದೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ.
ಮನೆ ಕೆಲಸ ಮಾಡುತ್ತಿದ್ದ ನೇಪಾಳದ ತುಲಾವೋರ್ ಮತ್ತು ದೊಡ್ಡಪ್ಪ ದೇವ ದಂಪತಿಯ ಪುತ್ರ ಅನಂತ್.
ಅಯ್ಯಪ್ಪನಗರ ಸಮೀಪದ ಎಸ್.ಇ.ಎ. ಕಾಲೇಜು ರಸ್ತೆಯಲ್ಲಿರುವ ಬಾಲರಾಜ್ ಮಾಲೀಕತ್ವದ ಕಟ್ಟಡದ ಮೂರನೇ ಮಹಡಿಯಲ್ಲಿ ಕುಟುಂಬ ವಾಸಿಸುತ್ತಿತ್ತು.
ಸೋಮವಾರ ಶಾಲೆಯಿಂದ ಹಿಂತಿರುಗಿ ಬಂದಿದ್ದ ಅನಂತ್ ಮನೆಯ ಮಹಡಿಯಲ್ಲಿ ಆಟ ಆಡುವಾಗ ಮನೆಯಲ್ಲಿದ್ದ ಪೊರೆಕೆ ಎಸೆದಿದ್ದಾನೆ. ಅದು ಮನೆ ಮುಂದೆ (ಎಂಟು ಅಡಿ ಅಂತರ) ಹಾದುಹೋಗಿರುವ 220 ಕೆವಿ ಹೈಟೆನ್ಷನ್ ತಂತಿಗೆ ತಗುಲಿದೆ. ಪೊರಕೆ ಮೂಲಕ ವಿದ್ಯುತ್ ಪ್ರವಹಿಸಿ ಬಾಲಕನಿಗೆ ಶಾಕ್ ಹೊಡೆದಿದೆ. ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಮೃತಪಟ್ಟಿದ್ದಾನೆ.
‘ಮೃತ ಬಾಲಕನ ತಾಯಿಯ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿಕೊಳ್ಳುತ್ತೇವೆ’ ಎಂದು ಕೆ.ಆರ್.ಪುರ ಠಾಣೆ ಪೋಲಿಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.