ಕೆ.ಆರ್.ಪುರ: ಮಹದೇವಪುರ ಕ್ಷೇತ್ರದಲ್ಲಿ ಆಯೋಜಿಸಿದ್ದ ಗ್ರಾಮಸಭೆಗೆ ಸರಿಯಾದ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಕನ್ನಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಉದ್ಘಾಟಿಸಿ, ತೆರಳಿದರು. 16 ಸದಸ್ಯರ ಪೈಕಿ 11 ಸದಸ್ಯರು ಕಾರ್ಯಕ್ರಮಕ್ಕೆ ಗೈರು ಹಾಜರಾದರು.
‘ಸಭೆಗೆ ಮುಂಚಿತವಾಗಿ ಆಹ್ವಾನ ನೀಡಿಲ್ಲ, ಕಾಟಾಚಾರಕ್ಕೆ ಕರೆಯಲಾಗಿದೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂದು ಅಧ್ಯಕ್ಷೆ ಪವಿತ್ರಾ ರವಿಕುಮಾರ್ ಮತ್ತು ಪಿಡಿಒ ಶ್ರೀಧರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಏಳು ತಿಂಗಳಿನಿಂದಲೂ ಸಭೆ ನಡೆಸಿಲ್ಲ. ಪಂಚಾಯತಿ ವ್ಯಾಪ್ತಿಗೆ ಬರುವ ಕಾಜಿಸೊಣ್ಣೆನಹಳ್ಳಿಯಲ್ಲಿ ಸಮರ್ಪಕ ಕುಡಿಯುವ ನೀರಿಲ್ಲ. ರಸ್ತೆ ಡಾಂಬರೀಕರಣವಾಗಿಲ್ಲ. ಅಧ್ಯಕ್ಷೆ ಪವಿತ್ರ ಬದಲಾವಣೆ ಮಾಡಬೇಕು’ ಎಂದು ಸದಸ್ಯರಾದ ಸೋಮಶೇಖ್, ಯಲ್ಲಪ್ಪ ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.