ADVERTISEMENT

ಬೆಂಗಳೂರು: ಜಾಗತಿಕ ಮಹಿಳಾ ನಾಯಕಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 16:25 IST
Last Updated 18 ಫೆಬ್ರುವರಿ 2024, 16:25 IST
ಮುಂಬೈಯಲ್ಲಿ ‘ಜಾಗತಿಕ ಮಹಿಳಾ ನಾಯಕಿ’ ಹಾಗೂ ಇತರ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿಯ ಸೌಮ್ಯಾ ಸಿ., ಶಿಬಾ ಎಸ್.,  ಲತಾ ಟಿ.ಎಸ್‌., ಎಚ್‌.ಎಸ್‌. ಸತೀಶ್‌ ಸ್ವೀಕರಿಸಿದರು
ಮುಂಬೈಯಲ್ಲಿ ‘ಜಾಗತಿಕ ಮಹಿಳಾ ನಾಯಕಿ’ ಹಾಗೂ ಇತರ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿಯ ಸೌಮ್ಯಾ ಸಿ., ಶಿಬಾ ಎಸ್.,  ಲತಾ ಟಿ.ಎಸ್‌., ಎಚ್‌.ಎಸ್‌. ಸತೀಶ್‌ ಸ್ವೀಕರಿಸಿದರು   

ಬೆಂಗಳೂರು: ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಟಿ.ಎಸ್. ಅವರಿಗೆ ಜಾಗತಿಕ ಉತ್ಪಾದನಾ ಕಾಂಗ್ರೆಸ್‌ ಮತ್ತು ಜಾಗತಿಕ ಮಾರುಕಟ್ಟೆ ಕಾಂಗ್ರೆಸ್‌ ಸಂಸ್ಥೆಯು ‘ಜಾಗತಿಕ ಮಹಿಳಾ ನಾಯಕಿ’ ಪ್ರಶಸ್ತಿ ನೀಡಿ ಗೌರವಿಸಿದೆ.

ಮುಂಬೈನ ತಾಜ್‌ ಲ್ಯಾಂಡ್ಸ್‌ ಆ್ಯಂಡ್‌ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುನೈಟೆಡ್ ಸ್ಟೇಟ್ಸ್‌ನ ನಿನಾ ಇ ಉಡರ್ಡ ಅಸೋಸಿಯೇಟ್ಸ್ ಅಧ್ಯಕ್ಷೆ ನಿನಾ, ದುಬೈ ಓಝೋನ್ ಗ್ರೂಪ್ ಸಂಸ್ಥಾಪಕರಾದ ಓವಿಲಿಯಾ ಫೆರ್ನಾಂಡಿಸ್ ಪ್ರಶಸ್ತಿ ಪ್ರದಾನ ಮಾಡಿದರು.

ಕೆಎಸ್‌ಆರ್‌ಟಿಸಿಗೆ ಐದು ಪ್ರಶಸ್ತಿ: ವಿದ್ಯುತ್ ವಾಹನಗಳ ಕೈಗಾರಿಕಾ ನಾಯಕತ್ವ ಪ್ರಶಸ್ತಿ, ಜಾಗತಿಕ ಬ್ರ್ಯಾಂಡ್ ಉತ್ಕೃಷ್ಟತೆ ಪ್ರಶಸ್ತಿ, ವರ್ಷದ ವ್ಯಾವಹಾರಿಕ ನಾಯಕತ್ವ ಪ್ರಶಸ್ತಿ, ಜಾಗತಿಕ ಮಾನವ ಸಂಪನ್ಮೂಲ ಉತ್ಕೃಷ್ಟತೆ ಪ್ರಶಸ್ತಿ, ಜಾಗತಿಕ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್‌ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರದಾನ ಮಾಡಲಾಯಿತು.

ADVERTISEMENT

ಕೆಎಸ್‌ಆರ್‌ಟಿಸಿ ಪರವಾಗಿ ವಿಭಾಗೀಯ ತಾಂತ್ರಿಕ ಎಂಜಿನಿಯರ್‌ ಎಚ್‌.ಎಸ್‌. ಸತೀಶ್‌, ವಿಭಾಗೀಯ ತಾಂತ್ರಿಕ ಶಿಲ್ಪಿ ಸೌಮ್ಯಾ ಸಿ., ಸಹಾಯಕ ಆಡಳಿತಾಧಿಕಾರಿ ಶಿಬಾ ಎಸ್. ಪ್ರಶಸ್ತಿಯನ್ನು ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.