ಬೆಂಗಳೂರು: ಕೆಎಸ್‌ಆರ್‌ಟಿಸಿ ಸೋಮನಾಥಪುರ ಟೂರ್ ಪ್ಯಾಕೇಜ್ ಮತ್ತು ಜೋಗ ಟೂರ್ ಪ್ಯಾಕೇಜ್ ರೂಪಿಸಿದೆ.
ಬೆಂಗಳೂರು-ಜೋಗ ಜಲಪಾತ ಮಾರ್ಗದ ಪ್ಯಾಕೇಜ್ ಪ್ರವಾಸದಡಿ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ಬಸ್ ಸಂಚರಿಸಲಿದೆ. ಸಾಗರ, ವರದಹಳ್ಳಿ, ವರದಾಮೂಲ, ಇಕ್ಕೇರಿ, ಕೆಳದಿ, ಜೋಗಕ್ಕೆ ಭೇಟಿ ನೀಡಲಿದೆ. ಪ್ರತಿ ಶುಕ್ರವಾರ– ಶನಿವಾರ ಈ ಪ್ರವಾಸ ಇರಲಿದ್ದು, ಜುಲೈ 19ರಂದು ಆರಂಭಗೊಳ್ಳಲಿದೆ. ವಯಸ್ಕರಿಗೆ ₹ 3,000 ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹ 2,800 ದರ ನಿಗದಿ ಮಾಡಲಾಗಿದೆ.
ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ ಮಾರ್ಗದ
ಪ್ಯಾಕೇಜ್ ಪ್ರವಾಸವು ಪ್ರತಿ ಶನಿವಾರ–ಭಾನುವಾರ ಇರಲಿದ್ದು, ಜುಲೈ 20ರಂದು ಆರಂಭಗೊಳ್ಳಲಿದೆ. ವಯಸ್ಕರಿಗೆ ₹ 500 ಹಾಗೂ 12 ವರ್ಷದೊಳಗಿನ ಮಕ್ಕಳಿಗೆ ₹ 350 ದರ ನಿಗದಿ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.