
ಬೆಂಗಳೂರು: ವಿವಿಧ ಕೋರ್ಸ್‌ಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ಚಿನ್ನದ ಪದಕ ಪಡೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮಕ್ಕಳಿಗೆ ನಿಗಮದಿಂದ ತಲಾ ₹ 5 ಸಾವಿರ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವೈಯಕ್ತಿಕವಾಗಿ ಕೊಟ್ಟಿರುವ ತಲಾ ₹20 ಸಾವಿರವನ್ನು ಬುಧವಾರ ನೀಡಿ ಗೌರವಿಸಲಾಯಿತು.
ನಿಗಮದ ಪ್ರಾದೇಶಿಕ ಕಾರ್ಯಾಗಾರದಲ್ಲಿ ಕುಶಲಕರ್ಮಿ ಆಗಿರುವ ಮುನಿರಾಜಪ್ಪ ಕೆ.ಇ. ಅವರ ಮಗಳು ಗಗನ ಎಂ. (ಎಂಬಿಬಿಎಸ್‌ನಲ್ಲಿ ಚಿನ್ನದ ಪದಕ), ಚಾಲಕ ಕಂ ನಿರ್ವಾಹಕ ರೇಣುಕಾರ್ಯ ಟಿ.ಕೆ. ಅವರ ಮಗಳು ವಿಸ್ಮಯ ಟಿ.ಆರ್. (ಎಂ.ಟೆಕ್‌ನಲ್ಲಿ ಚಿನ್ನದ ಪದಕ), ಚಿಕ್ಕಬಳ್ಳಾಪುರ ವಿಭಾಗದ ಸಂಚಾರ ನಿಯಂತ್ರಕ ಮೆಹಬೂಬ್ ಸಾಬ್ ಎಚ್. ಅವರ ಮಗಳು ರೂಫಿಯಾ ಕೆ.ಎಂ. (ಎಂಎಸ್‌ಸಿಯಲ್ಲಿ ಚಿನ್ನದ ಪದಕ), ಚಾಲಕ ಕಂ ನಿರ್ವಾಹಕಿ ಪದ್ದವ್ವ ಗಣಿ ಅವರ ಮಗ ಸತೀಶ್ ಕುಮಾರ್ ದೊಡ್ಡಮನಿ (ಪ್ರದರ್ಶನ ಕಲೆ– ನಾಟಕ ವಿಭಾಗದಲ್ಲಿ ಸ್ನಾತಕೋತ್ತರದಲ್ಲಿ ಚಿನ್ನದ ಪದಕ), ಚಾಲಕ ಕಂ ನಿರ್ವಾಹಕ ಅಕ್ರಂ ಪಾಷ ಅವರ ಮಗಳು ಸಾನಿಯಾ ಬಿ. (ಬಿಡಿಎಸ್‌ನಲ್ಲಿ ಚಿನ್ನದ ಪದಕ) ಹಾಗೂ ಚಾಲಕ ಕಂ ನಿರ್ವಾಹಕ ತಾಯಬ್ ಅಹ್ಮದ್ ಅವರ ಮಗಳು ಟಿ. ಹರ್ಮೀನ್ (ಬಿಎಸ್‌ಸಿಯಲ್ಲಿ ಚಿನ್ನದ ಪದಕ) ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸ ಯಶಸ್ಸಿನ ಮಂತ್ರಗಳು. ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ವಿಜ್ಞಾನ, ತಂತ್ರಜ್ಞಾನ, ಕಲೆ, ಕ್ರೀಡೆ ಅಥವಾ ನಿಮ್ಮ ಆಯ್ಕೆಯ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ’ ಎಂದರು.
‘ನಿಗಮದ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಾರಿಗೆ ವಿದ್ಯಾಚೇತನ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಅಡಿಯಲ್ಲಿ ಈವರೆಗೂ 5,450 ವಿದ್ಯಾರ್ಥಿಗಳಿಗೆ ₹ 2.76 ಕೋಟಿ ನೀಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.