ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್‌ ರಹಿತ ಪ್ರಯಾಣ: 4,353 ಜನರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 15:48 IST
Last Updated 17 ಜನವರಿ 2026, 15:48 IST
<div class="paragraphs"><p>ಕೆಎಸ್‌ಆರ್‌ಟಿಸಿ ಬಸ್‌   </p></div>

ಕೆಎಸ್‌ಆರ್‌ಟಿಸಿ ಬಸ್‌

   

– ಪ್ರಜಾವಾಣಿ ಸಂಗ್ರಹ ಚಿತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಡಿಸೆಂಬರ್‌ನಲ್ಲಿ ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಿದ್ದ 4,353 ಪ್ರಯಾಣಿಕರಿಂದ ₹8.08 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ADVERTISEMENT

ಕೆಎಸ್‌ಆರ್‌ಟಿಸಿ ತನಿಖಾ ತಂಡದಲ್ಲಿನ ಅಧಿಕಾರಿಗಳು 43,553 ಬಸ್‌ಗಳನ್ನು ತಪಾಸಣೆ ನಡೆಸಿದ್ದರು. ನಿಗಮದ ಆದಾಯದಲ್ಲಿ ₹1.14 ಲಕ್ಷ ಸೋರಿಕೆ ಪತ್ತೆ ಹಚ್ಚಿದ್ದರು. ಅದನ್ನು ದಂಡ ಸಹಿತ ವಸೂಲಿ ಮಾಡಲಾಗಿದೆ. ಪ್ರಯಾಣಿಕರು ಟಿಕೆಟ್‌ ಅಥವಾ ಬಸ್‌ ಪಾಸ್‌ ಪಡೆದು ಪ್ರಯಾಣಿಸಬೇಕು ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.