ADVERTISEMENT

16ರಂದು ಕೊರವಂಜಿ ಉತ್ಸವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:37 IST
Last Updated 12 ಫೆಬ್ರುವರಿ 2019, 19:37 IST

ಬೆಂಗಳೂರು: ಕರ್ನಾಟಕ ರಾಜ್ಯ ಕುಳುವ ಮಹಾಸಭಾ ಇದೇ 16ರಂದು ಶಿವಮೊಗ್ಗ ನಗರದ ಅಂಬೇಡ್ಕರ್‌ ಭವನ
ದಲ್ಲಿ ‘ಕೊರವಂಜಿ ಉತ್ಸವ’ ಕಾರ್ಯಕ್ರಮ ಆಯೋಜಿಸಿದೆ.

ಕೊರಚ, ಕೊರಮ ಮತ್ತು ಕೊರವ ಜನಾಂಗದ ಸಾಂಸ್ಕೃತಿಕ ಮಹತ್ವವನ್ನು ಸಾರಲು ರಥ ಯಾತ್ರೆಯನ್ನು ಆರಂಭಿಸಲಾಗಿದೆ. ಅದು ರಾಜ್ಯದಾದ್ಯಂತ ಸಂಚರಿಸಿ ಉತ್ಸವದ ದಿನಶಿವಮೊಗ್ಗಕ್ಕೆ ತಲುಪಲಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ.ಎನ್‌.ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇವು ತೀರ ಹಿಂದುಳಿದಅಲೆಮಾರಿ ಸಮುದಾಯಗಳಾಗಿವೆ.ಮಹಿಳೆಯರು ಕೊರವಂಜಿಗಳಾಗಿ ಕಣಿ ಹೇಳುತ್ತಾರೆ. ಕೊರವಂಜಿ ಕಲೆಯನ್ನು ಉಳಿಸುವ ದೃಷ್ಟಿಯಿಂದ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

ಸಮುದಾಯದ ನಾಗಭೂಷಣಸ್ವಾಮೀಜಿ, ‘ಕೊರವಂಜಿ ಕಲೆಯನ್ನು ಉಳಿಸಿ, ಬೆಳಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕು. ಕೊರವಂಜಿಗಳಿಗೆ ಸರ್ಕಾರದಿಂದ ನೆರವು ಒದಗಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.