ADVERTISEMENT

ಕುವೆಂಪು ಕೃತಿಗಳು ಕಡಿಮೆ ದರದಲ್ಲಿ ಸಿಗಲಿ: ವೆಂಕಟೇಶ ಶೇಷಾದ್ರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 20:46 IST
Last Updated 29 ಡಿಸೆಂಬರ್ 2020, 20:46 IST
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರುಡ್ ಸೆಟ್ ಅಕಾಡೆಮಿಯ ಪಿ.ರವೀಂದ್ರ, ಸುಬ್ರಹ್ಮಣ್ಯ, ಸಂಪತ್ ಕುಮಾರ್, ವೆಂಕಟೇಶ ಶೇಷಾದ್ರಿ, ಶ್ರೀಕಾಂತ್ ಪತ್ರೇಮರ ಹಾಗೂ ಇತರರು ಇದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರುಡ್ ಸೆಟ್ ಅಕಾಡೆಮಿಯ ಪಿ.ರವೀಂದ್ರ, ಸುಬ್ರಹ್ಮಣ್ಯ, ಸಂಪತ್ ಕುಮಾರ್, ವೆಂಕಟೇಶ ಶೇಷಾದ್ರಿ, ಶ್ರೀಕಾಂತ್ ಪತ್ರೇಮರ ಹಾಗೂ ಇತರರು ಇದ್ದರು.   

ಬೆಂಗಳೂರು: ‘ಕುವೆಂಪು ಅವರು ಕನ್ನಡ ನುಡಿ, ಸಂಸ್ಕೃತಿಯ ಪತಾಕೆಯನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಮಹಾನ್ ಸಾಹಿತಿ. ಅವರ ಸಮಗ್ರ ಕೃತಿಗಳನ್ನು ಕೈಗೆಟಗುವ ದರದಲ್ಲಿ ಪ್ರಕಟಿಸಿ, ಓದುಗರಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು’ ಎಂದು ಮಲ್ಲೇಶ್ವರದಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯನಿರ್ದೇಶಕ ವೆಂಕಟೇಶ ಶೇಷಾದ್ರಿ ತಿಳಿಸಿದರು.

ಸಂಸ್ಥೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಶ್ರೀಕಾಂತ್ ಪತ್ರೇಮರ, ‘ವರಕವಿ ಬೇಂದ್ರೆಯವರಿಂದಲೇ ಯುಗದ ಕವಿ ಜಗದ ಕವಿ ಎಂದು ಪ್ರಶಂಸೆಗೊಳಗಾದ ಕುವೆಂಪು, ಒಬ್ಬ ದಾರ್ಶನಿಕ ಲೇಖಕರು. ಕನ್ನಡ ನಾಡು ಕಂಡ ಧೀಮಂತರಾದ ಟಿ.ಎಸ್.ವೆಂಕಣ್ಣಯ್ಯ, ಬಿಎಂಶ್ರೀ, ಎ.ಆರ್.ಕೃಷ್ಣಶಾಸ್ತ್ರಿ ಅವರ ಒಡನಾಟ ಮತ್ತು ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು’ ಎಂದರು.

ADVERTISEMENT

ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಗಾಯಕ ಗಾನಧಾರೆ ಕೃಷ್ಣ ಅವರು ಕುವೆಂಪು ವಿರಚಿತ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.