ADVERTISEMENT

ಕೆಎಫ್‌ಡಿ: ಡೆಪಾ ತೈಲ ಖರೀದಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 14:13 IST
Last Updated 17 ಜನವರಿ 2026, 14:13 IST
ಕಾಡಿನಲ್ಲಿ ಕೆಎಫ್‌ಡಿ ವೈರಸ್‌ ವಾಹಕ ಉಣುಗುಗಳು
ಕಾಡಿನಲ್ಲಿ ಕೆಎಫ್‌ಡಿ ವೈರಸ್‌ ವಾಹಕ ಉಣುಗುಗಳು   

ಬೆಂಗಳೂರು: ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ನಿಯಂತ್ರಣಕ್ಕೆ ಅಗತ್ಯವಿರುವ ಡೆಪಾ ತೈಲ ಖರೀದಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ. 

ಕೆಎಫ್‌ಡಿ ಸೋಂಕನ್ನು ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ. ಸೋಂಕಿನ ಅಪಾಯ ಕಡಿಮೆ ಮಾಡಲು ಡೆಪಾ ತೈಲ ಸಹಕಾರಿ. ಸದ್ಯ ಡೆಪಾ ತೈಲದ 2.78 ಲಕ್ಷ ಬಾಟಲಿಗಳು ಲಭ್ಯವಿದೆ. ಈ ದಾಸ್ತಾನು ಫೆಬ್ರುವರಿ ಎರಡನೇ ವಾರದವರೆಗೆ ವಿತರಿಸಬಹುದಾಗಿದೆ.

ಮಾರ್ಚ್‌ನಿಂದ ಜೂನ್‌ವರೆಗೆ ವಿತರಿಸಲು ಡೆಪಾ ತೈಲದ 5.74 ಲಕ್ಷ ಬಾಟಲಿಗಳು ಅಗತ್ಯವಿದ್ದು, ಅಷ್ಟು ಪ್ರಮಾಣದಲ್ಲಿ ತೈಲದ ಖರೀದಿಗೆ ಅನುಮೋದನೆ ನೀಡಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.