ADVERTISEMENT

‘ಸರ್ಕಾರಗಳಿಂದ ಕಾರ್ಮಿಕ ಕಾನೂನುಗಳು ಬಲಹೀನ’

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:58 IST
Last Updated 15 ಸೆಪ್ಟೆಂಬರ್ 2019, 19:58 IST
ಹಿರಿಯ ವಕೀಲ ಕೆ.ಸುಬ್ಬರಾವ್‌ ಮತ್ತು ನ್ಯಾ.ವಿ.ಗೋಪಾಲ ಗೌಡ ಚರ್ಚಿಸಿದರು. ಮದ್ರಾಸ್ ಹೈಕೋರ್ಟ್ ವಕೀಲೆ ರಾಮಪ್ರಿಯಾ, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಪ್ರೊ.ಬಾಬು ಮ್ಯಾಥ್ಯೂ ಇದ್ದಾರೆ -ಪ್ರಜಾವಾಣಿ ಚಿತ್ರ 
ಹಿರಿಯ ವಕೀಲ ಕೆ.ಸುಬ್ಬರಾವ್‌ ಮತ್ತು ನ್ಯಾ.ವಿ.ಗೋಪಾಲ ಗೌಡ ಚರ್ಚಿಸಿದರು. ಮದ್ರಾಸ್ ಹೈಕೋರ್ಟ್ ವಕೀಲೆ ರಾಮಪ್ರಿಯಾ, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಪ್ರೊ.ಬಾಬು ಮ್ಯಾಥ್ಯೂ ಇದ್ದಾರೆ -ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಕಾರ್ಮಿಕರ ಶಕ್ತಿ ಬಗ್ಗೆಆಳುವ ಸರ್ಕಾರಗಳಿಗೆ ಭಯವಿಲ್ಲ. ಇದರ ಪರಿಣಾಮ ಕಾರ್ಮಿಕ ಕಾನೂನುಗಳು ದಿನೇ ದಿನೇ ಬಲಹೀನಗೊಳ್ಳುತ್ತಿವೆ’ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಳವಳ ವ್ಯಕ್ತಪಡಿಸಿದರು.

‘ಸಂಶೋಧನೆ ಮತ್ತು ಕ್ರಮಕ್ಕಾಗಿ ಕರ್ನಾಟಕ ಕಾರ್ಮಿಕ ಪ್ರತಿನಿಧಿಗಳ ವೇದಿಕೆ’ಯು ಭಾನುವಾರ ಆಯೋಜಿಸಿದ್ದ ‘ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಕಾಯ್ದೆ -2019' ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಬಂಡವಾಳಶಾಹಿಗಳ ಕೈಗೊಂಬೆಯಾಗಿರುವಸರ್ಕಾರಗಳುಕಾರ್ಮಿಕ ಕಾಯ್ದೆಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಿವೆ. ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲುಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ಕಾಯ್ದೆಯಲ್ಲಿ ಹಲವಾರು ನ್ಯೂನತೆಗಳಿವೆ. ಇದರ ವಿರುದ್ಧ ಹೋರಾಟಕ್ಕೆ ಮುಂದಾಗದೆ ಇದ್ದರೆ,ಭವಿಷ್ಯದಲ್ಲಿ ಕಾರ್ಮಿಕರಿಗೆ ಮಾರಕವಾಗಲಿದೆ’ ಎಂದರು.

ADVERTISEMENT

ವಕೀಲೆ ರಾಮಪ್ರಿಯಾ, ‘ನೂತನ ಕಾರ್ಮಿಕ ಕಾಯ್ದೆಯಲ್ಲಿ ಕೃಷಿ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿಲ್ಲ. ಕಾರ್ಮಿಕರ ಕೆಲಸದ ವೇಳೆಯನ್ನು ಕೂಡ ಸರಿಯಾಗಿ ವ್ಯಾಖ್ಯಾನ ಮಾಡಿಲ್ಲ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.