ADVERTISEMENT

ಪೀಣ್ಯ ದಾಸರಹಳ್ಳಿ: ಕೆರೆ ಒತ್ತುವರಿ ತೆರವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 0:04 IST
Last Updated 31 ಜುಲೈ 2024, 0:04 IST
ಚಿಕ್ಕಬಾಣಾವರ ಕೆರೆಯ ಜಮೀನಿನ ನಕ್ಷೆ ವೀಕ್ಷಿಸಿದ ಶಾಸಕ ಎಸ್. ಮುನಿರಾಜು ಅವರು ಒತ್ತುವರಿ ಕುರಿತು ಮಾಹಿತಿ ಪಡೆದರು
ಚಿಕ್ಕಬಾಣಾವರ ಕೆರೆಯ ಜಮೀನಿನ ನಕ್ಷೆ ವೀಕ್ಷಿಸಿದ ಶಾಸಕ ಎಸ್. ಮುನಿರಾಜು ಅವರು ಒತ್ತುವರಿ ಕುರಿತು ಮಾಹಿತಿ ಪಡೆದರು   

ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎಸ್. ಮುನಿರಾಜು, ಬಿಡಿಎ ಮತ್ತು ಪುರಸಭೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

105 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯ ಅಭಿವೃದ್ಧಿಗೆ ಬಿಡಿಎ ₹12.60 ಕೋಟಿ ಮತ್ತು ಪುರಸಭೆ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.‌

ಕೆರೆಯ ನೀಲ ನಕ್ಷೆಯನ್ನು ಪರಿಶೀಲಿಸಿದ ಶಾಸಕ ಮುನಿರಾಜು, ಸರ್ವೆ ಅಧಿಕಾರಿಗಳಿಂದ ಕೆರೆ ಒತ್ತುವರಿ ಕುರಿತು ಮಾಹಿತಿ ಪಡೆದರು. ಮುಲಾಜಿಲ್ಲದೆ ಒತ್ತುವರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಬಿಡಿಎ ಎಂಜಿನಿಯರ್ ಅರವಿಂದ್, ‘ಚಿಕ್ಕಬಾಣಾವರ ಕೆರೆಯ ಒತ್ತುವರಿ ಜಾಗವನ್ನು ಮತ್ತೊಮ್ಮೆ ಭೂಮಾಪನ ಮಾಡಿಸಿ ಸ್ಥಳ ಗುರುತಿಸಿದರೆ, ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಎ. ಕುಮಾರ್, ಎಂಜಿನಿಯರ್‌ಗಳಾದ ಸುಮತಿ, ಹರೀಶ್, ಉಪ ತಹಸೀಲ್ದಾರ್ ಉಷಾ, ಬಿಡಿಎ ಎಂಜಿನಿಯರ್‌ಗಳಾದ ನವೀನ್, ಸ್ಥಳೀಯ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.